ಕಾಸರಗೋಡು: ಕಾಸರಗೋಡು ನಗರಸಭೆ ವ್ಯಾಪ್ತಿಯ ಎಲ್ಲಾ ಕ್ಷಯ ರೋಗಿಗಳಿಗೆ ಪೌಷ್ಟಿಕಾಂಶ ಕಿಟ್ ವಿತರಿಸಲಾಯಿತು. ವಾರ್ಷಿಕ ಯೋಜನೆಯ ಮೂಲಕ ಪ್ರತಿ ರೋಗಿಗೆ ಉಚಿತವಾಗಿ ಕಿಟ್ ನೀಡಲಾಗುತ್ತದೆ. ನಗರಸಭೆಯು ತಿಂಗಳಿಗೆ ರೂ.2500 ಮೌಲ್ಯದ ವಸ್ತುಗಳನ್ನು ಒಳಗೊಂಡ ಪೌಷ್ಟಿಕಾಂಶದ ಕಿಟ್ ಅನ್ನು ಒದಗಿಸುತ್ತದೆ. ಸÀರ್ಕಾರದಿಂದ ಉಚಿತ ಚಿಕಿತ್ಸೆ ನೀಡುವುದರ ಜೊತೆಗೆ ಈ ಮೂಲಕ ದೈಹಿಕ ಮತ್ತು ಮಾನಸಿಕ ಬೆಂಬಲವನ್ನು ನಗರಸಭೆ ನೀಡುತ್ತಿದೆ ಎಂದು ನಗರಸಭೆ ಅಧ್ಯಕ್ಷೆ ನ್ಯಾಯವಾದಿ.ವಿ.ಎಂ.ಮುನೀರ್ ಹೇಳಿದರು.
ಕಾಸರಗೋಡು ಜಿಲ್ಲಾ ಟಿಬಿ ಕೇಂದ್ರದಲ್ಲಿ ನಡೆದ ಪೌಷ್ಟಿಕಾಂಶ ಕಿಟ್ ವಿತರಣೆಯನ್ನು ನಗರಸಭೆ ಅಧ್ಯಕ್ಷ ನ್ಯಾಯವಾದಿ.ವಿ.ಎಂ.ಮುನೀರ್ ಉದ್ಘಾಟಿಸಿದರು. ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಖಾಲಿದ್ ಪಚ್ಚಕ್ಕಾಡ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಟಿಬಿ ಅಧಿಕಾರಿ ಡಾ.ಮುರಳೀಧರ ನಲ್ಲೂರಾಯ, ಕಾಸರಗೋಡು ಜನರಲ್ ಆಸ್ಪತ್ರೆ ಉಪ ಅಧೀಕ್ಷಕ ಡಾ.ಜಮಾಲ್ ಅಹಮದ್, ನಗರಸಭೆಯ ಟಿಬಿ ಆರೋಗ್ಯ ವಿಸಿಟರ್ ನಿತೀಶ್ ಲಾಲ್, ಡಿಆರ್ ಟಿಬಿ ಸಂಯೋಜಕ ರತೀಶ್ ಅಂಬಲತ್ತರ ಮಾತನಾಡಿದರು.
ಕಾಸರಗೋಡು ನಗರಸಭೆಯಿಂದ ಟಿಬಿ ರೋಗಿಗಳಿಗೆ ಪೌಷ್ಟಿಕಾಂಶ ಕಿಟ್
0
ಜನವರಿ 01, 2023
Tags