ಕಾಸರಗೋಡು: ಕಾಕಿ ಬಟ್ಟೆ ತೊಟ್ಟು ಕಾನೂನು ಪಾಲನೆಯಲ್ಲಿ ತೊಡಗಿಸಿಕೊಂಡಿರುವ ಯುವ ಪೊಲೀಸ್ ಅಧಿಕಾರಿ ಕಥಕ್ಕಳಿ ವೇಷತೊಟ್ಟು ರಂಗ ಪ್ರವೇಶ ಮಾಡುವ ಮೂಲಕ ಪ್ರೇಕ್ಷಕರ ಹುಬ್ಬೇರಿಸುವಂತೆ ಮಾಡಿದ್ದಾರೆ!
ಕಾಸರಗೋಡು ಸ್ಪೆಶ್ಯಲ್ ಬ್ರಾಂಚ್ ಡಿವೈಎಸ್‍ಪಿ ಡಾ. ವಿ.ಬಾಲಕೃಷ್ಣನ್ ನರಸಿಂಹಮೂರ್ತಿಯಾಗಿ ವೇಷಧರಿಸಿ ಕಥಕ್ಕಳಿ ಕಲಾವಿದರಾಗಿ ವೇದಿಕೆಯಲ್ಲಿ ಮಿಂಚಿದ್ದಾರೆ. ಡಾ. ವಿ. ಬಾಲಕೃಷ್ಣನ್ ಅವರು ಖ್ಯಾತ ಕಥಕ್ಕಳಿ ಕಲಾವಿದ, ನಾಟ್ಯರತ್ನಂ ವಿ.ಪಿ ಕಣ್ಣನ್ ಪಾಟಾಳಿ ಅವರ ಪುತ್ರನಾಗಿದ್ದಾರೆ. ತಮ್ಮ ತಂದೆಯ ಹೆಸರಿನ ಸ್ಮಾರಕ ಬೇಕಲ ಅರವತ್‍ನಲ್ಲಿ ಕಾರ್ಯಾಚರಿಸುತ್ತಿರುವ ನಾಟ್ಯರತ್ನಂ ವಿ.ಪಿ ಕಣ್ಣನ್ ಪಾಟಾಳಿ ಸ್ಮಾರಕ ಟ್ರಸ್ಟ್ ನೇತೃತ್ವದಲ್ಲಿ ತಚ್ಚಂಗಾಡ್ ಸಾಂಸ್ಕøತಿಕ ನಿಲಯದಲ್ಲಿ ನಡೆದ ಹತ್ತನೇ ವರ್ಷದ ಸಂಸ್ಮರಣಾ ಸಮಾರಂಭದಲ್ಲಿ 'ಪ್ರಹ್ಲಾದ ಚರಿತ'ಕಥಕ್ಕಳಿಯಲ್ಲಿ ನರಸಿಂಹ ಮೂರ್ತಿಯಾಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಇವರ ಜತೆಗೆ ಕಥಕ್ಕಳಿ ಕಲಾವಿದರಾದ ಕಲಾನಿಲಯಂ ವಾಸುದೇವನ್ ಅವರು ಹಿರಣ್ಯಕಶಿಪುವಾಗಿ, ಕೊಟ್ಟಕ್ಕಲ್ ಮನೋಜ್ ಪ್ರಹ್ಲಾದನಾಗಿ, ತ್ರಶ್ಯೂರ್ ಆರ್.ಟಿ.ಓ ಕಚೇರಿಯಲ್ಲಿ ಸೂಪರಿಂಟೆಂಡೆಂಟ್ ಆಗಿರುವ ಇರಿಞËಲಕುಡ ಬಾಬು ಮುರಳೀಧರನ್ ಶುಕ್ರಾಚಾರ್ಯನಾಗಿ ವೇಷತೊಟ್ಟು ರಂಗದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಗಾಯಕರಾಗಿ ತ್ರಿಶ್ಯೂರ್ ವಿಜಿಲೆನ್ಸ್ ನ್ಯಾಯಾಲಯದ ಶ್ರೀರಾಗ್‍ವರ್ಮ ಸಹಕರಿಸಿದರು. ಪೊಲೀಸ್ ಅಧಿಕಾರಿಯೊಬ್ಬರ ಕಥಕ್ಕಳಿ ಕಾಣಲು ಜಿಲ್ಲೆಯ ಶಾಸಕರು, ಇತರ ಜನಪ್ರತಿನಿಧಿಗಳು, ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ನೂರರು ಮಂದಿ ಪ್ರೇಕ್ಷಕರು ಬಂದು ಸೇರಿದ್ದರು. ಈ ಸಂದರ್ಭ ನಾಟ್ಯರತ್ನಂ ವಿ.ಪಿ ಕಣ್ಣನ್ ಪಾಟಾಳಿ ಸ್ಮಾರಕ ಪ್ರಶಸ್ತಿ ಪ್ರದಾನ, ಕಲಾವಿದರಿಗೆ ಸನ್ಮಾನ ಕಾರ್ಯಕ್ರಮವೂ ಜರುಗಿತು.
ಜನಮನಸೂರೆಗೊಂಡ ಪೊಲೀಸ್ ಅಧಿಕಾರಿಯ ಕಥಕ್ಕಳಿ ಪ್ರದರ್ಶನ-ತಂದೆಯ ಸ್ಮರಣಾರ್ಥ ವೇಷತೊಟ್ಟು ರಂಗಪ್ರವೇಶಿಸಿದ ಡಿವೈಎಸ್‍ಪಿ
0
ಜನವರಿ 31, 2023
Tags