ಕಾಸರಗೋಡು: ಜಿಲ್ಲಾ ಉದ್ಯೋಗ ವಿನಿಮಯ ಮತ್ತು ಉದ್ಯೋಗ ಕೇಂದ್ರದ ವತಿಯಿಂದ ಆಯೋಜಿಸಲಾದ 'ನಿಯುಕ್ತಿ'ಉದ್ಯೋಗ ಮೇಳ ಕಾಞಂಗಾಡು ಸರ್ಕಾರಿ ಹೈಯರ್ ಸಎಕೆಂಡರಿ ಶಾಲೆಯಲ್ಲಿ ಜರುಗಿತು. ಮೇಳ. ಕಾಞಂಗಾಡು ನಗರಸಭಾ ಅಧ್ಯಕ್ಷೆ ಕೆ.ವಿ.ಸುಜಾತ ಮೇಳ ಉದ್ಘಾಟಿಸಿದರು. ಕಾಞಂಗಾಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ. ಮಣಿಕಂಠನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾಞಂಗಾಡು ನಗರಸಭಾ ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ಕೆ.ವಿ ಮಾಯಾ ಕುಮಾರಿ ಅಧ್ಯಕ್ಷತೆ ವಹಿಸಿದ್ದರು.
ಕಾಞಂಗಾಡು ನಗರಸಭಾ ಸದಸ್ಯೆ ವಂದನಾ ಬಾಲರಾಜ್, ಜಿಎಚ್‍ಎಸ್‍ಎಸ್ ಹೊಸದುರ್ಗ ಪ್ರಾಂಶುಪಾಲ ಡಾ.ಎ.ವಿ.ಸುರೇಶ್ ಬಾಬು, ಪ್ರಾಂಶುಪಾಲ ಪಿ. ಗಂಗಾಧರನ್, ಪಿಟಿಎ ಅಧ್ಯಕ್ಷ ಸಂತೋಷ ಕುಶಾಲನಗರ, ಎನ್ ಎಸ್ ಎಸ್ ಸಂಯೋಜಕ ಸಿ.ಕೆ. ಅಜಿತ್ ಕುಮಾರ್ ಉಪಸ್ಥಿತರಿದ್ದರು. ಉದ್ಯೋಗ ಮೇಳದಲ್ಲಿ 247 ಅಭ್ಯರ್ಥಿಗಳು ಮತ್ತು 20 ಉದ್ಯೋಗದಾತರು ಭಾಗವಹಿಸಿದ್ದರು. ವಿವಿಧ ವರ್ಗಗಳ 103 ಅಭ್ಯರ್ಥಿಗಳನ್ನು ಸ್ಥಳದಲ್ಲಿ ನೇಮಕ ಮಾಡಿಕೊಳ್ಳಲಾಗಿದ್ದು, 80 ಅಭ್ಯರ್ಥಿಗಳನ್ನು ನೇಮಕಾತಿಗೆ ಆಯ್ಕೆ ಮಾಡಲಾಗಿದೆ. ಕಾಸರಗೋಡು ಉದ್ಯೋಗಾಧಿಕಾರಿ ಕೆ.ಸಲೀಮ್ ಸ್ವಾಗತಿಸಿದರು. ಹೊಸದುರ್ಗ ನಗರ ಉದ್ಯೋಗಾಧಿಕಾರಿ ಜಯಪ್ರಕಾಶ್ ವಂದಿಸಿದರು.