ಕಾಸರಗೋಡು: ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿಯ (ಎಎಸ್‍ಆರ್‍ಬಿ) ಶಿಫಾರಸ್ಸಿನ ಮೇರೆಗೆ ಐಸಿಎಆರ್-ಸೆಂಟ್ರಲ್ ಪ್ಲಾಂಟೇಶನ್ ಕ್ರಾಪ್ಸ್ ರಿಸರ್ಚ್ ಇನ್‍ಸ್ಟಿಟ್ಯೂಟ್ (ಸಿಪಿಸಿಆರ್‍ಐ), ಕಾಸರಗೋಡು ನಿರ್ದೇಶಕರಾಗಿ ಡಾ.ಕೆ.ಬಾಲಚಂದ್ರ ಹೆಬ್ಬಾರ್ ಅವರನ್ನು ನೇಮಕ ಮಾಡಲಾಗಿದ್ದು, ಜ. 23ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಡಾ. ಕೆ ಬಿ ಹೆಬ್ಬಾರ್ ಅವರು 1995 ರಲ್ಲಿ ನಾಗ್ಪುರದ ಸೆಂಟ್ರಲ್ ಇನ್‍ಸ್ಟಿಟ್ಯೂಟ್ ಫಾರ್ ಕಾಟನ್ ರಿಸರ್ಚ್‍ನಲ್ಲಿ ವಿಜ್ಞಾನಿಯಾಗಿ ಸೇವೆ ಆರಂಭಿಸಿದ್ದ ಇವರು 2007 ರಲ್ಲಿ ಭೋಪಾಲ್‍ನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೋಲ್ ಸೈನ್ಸ್‍ನಲ್ಲಿ ಪ್ರಧಾನ ವಿಜ್ಞಾನಿಯಾಗಿ ಆಯ್ಕೆಯಾದರು.
2010 ರಿಂದ ಐಸಿಎಆರ್-ಸಿಪಿಸಿಆರ್‍ಐನ ಸಸ್ಯ ಶರೀರಶಾಸ್ತ್ರ, ಜೀವರಸಾಯನಶಾಸ್ತ್ರ ಮತ್ತು ನಂತರದ ಸುಗ್ಗಿಯ ತಂತ್ರಜ್ಞಾನದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಹವಾಮಾನ ಬದಲಾವಣೆಯಿಂದ ತೋಟಗಾರಿಕಾ ಬೆಳೆಗಳ ಮೆಲಿನ ಪ್ರಭಾವದ ಬಗ್ಗೆಯೂ ಅಧ್ಯಯನ ನಡೆಸಿದ್ದು, ಯುನೈಟೆಡ್ ಸ್ಟೇಟ್ಸ್ ಕೃಷಿ ಇಲಾಖೆಯಿಂದ 2010ರಲ್ಲಿ ಬೋರ್ಲಾಗ್ ಫೆಲೋ ಪ್ರಶಸ್ತಿಗೆ ಪಾತ್ರರಾಗಿದ್ದರು.
ತೆಂಗಿನ ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ, ತೆಂಗಿನಕಾಯಿ ರಸವನ್ನು (ನೀರಾ) ಸಂಗ್ರಹಿಸಲು ಸರಳ ತಂತ್ರಜ್ಞಾನ 'ಕೊಕೊಸಾಪ್ ಚಿಲ್ಲರ್' ಅನ್ನು ಅಭಿವೃದ್ಧಿಪಡಿಸಿದ್ದಾರೆ. ಸಿಪಿಸಿಆರ್‍ಐ ನಿರ್ದೇಶಕ ಡಾ ಪಿ ಚೌಡಪ್ಪ ಅವರ ನಿವೃತ್ತಿಯ ನಂತರ, ಡಾ ಅನಿತಾ ಕರುಣ್ ಮತ್ತು ಡಾ. ಕೆ ಮುರಳೀಧರನ್ ಅವರು ಜ. 22ರ ವರೆಗೆ ಪ್ರಭಾರ ನಿರ್ದೇಶಕರಗಿ ಸೇವೆ ಸಲ್ಲಿಸಿದ್ದಾರೆ.
ಸಿಪಿಸಿಆರ್‍ಐ ನಿರ್ದೇಶಕರಾಗಿ ಡಾ. ಕೆ.ಬಾಲಚಂದ್ರ ಹೆಬ್ಬಾರ್ ನೇಮಕ
0
ಜನವರಿ 22, 2023
Tags