HEALTH TIPS

ವಸುದೈವ ಕುಟುಂಬಕಂ ಎಂಬ ಋಷಿವಾಣಿಯ ಸಾಕ್ಷಾತ್ಕಾರ ಬದುಕಿನ ಭಾಗವಾಗಬೇಕು: ಬಿ.ಎಸ್.ಗಾಂಭೀರ್: ಎನ್.ಎಸ್.ಎಸ್ ಸಹವಾಸ ಶಿಬಿರ ಸಮಾರೋಪದಲ್ಲಿ ಅಭಿಮತ


          ಪೆರ್ಲ: ಪಾಠ ಪ್ರವಚನಗಳನ್ನು ಮಾತ್ರವಲ್ಲದೆ ಬದುಕಿನ ವ್ಯವಸ್ಥೆಯನ್ನು ಅರಿತುಕೊಳ್ಳಬೇಕು. ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ(ಎನ್.ಎಸ್.ಎಸ್.) ದೊರಕುವ ಜೀವನ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ವಿವಿಧತೆಯಲ್ಲಿ ಏಕತೆ ಎಂಬ ಆಶಯವನ್ನು ನನಸಾಗಿಸಬೇಕು ಎಂದು ಎಣ್ಮಕಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಬಿ. ಎಸ್. ಗಾಂಭೀರ ಹೇಳಿದರು.
           ಶೇಣಿಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯು ಬನ್ಪುತಡ್ಕದ ಎಸ್. ಡಿ. ಪಿ. ಎ. ಯು. ಪಿ. ಶಾಲೆಯಲ್ಲಿ ಆಯೋಜಿಸಿದ ಏಳು ದಿನಗಳ ಎನ್. ಎಸ್. ಎಸ್. ಸಹವಾಸ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
         ಬದುಕಿನಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸುವ ಧೈರ್ಯವನ್ನು ಮೈಗೂಡಿಸಿಕೊಳ್ಳಬೇಕು. ವಸುಧೈವ ಕುಟುಂಬಕಂ ಎಂಬ ಋಷಿವಾಣಿಯನ್ನು ಸಾಕ್ಷಾತ್ಕಾರಗೊಳಿಸಬೇಕು ಎಂದು ಅವರು ಅಭಿಪ್ರಾಯ ಪಟ್ಟರು.



           ಕಾರ್ಯಕ್ರಮವನ್ನು ಉದ್ಘಾಟಿಸಿದ ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಸೋಮಶೇಖರ ಜೆ. ಎಸ್. ಅವರು ಮಾತನಾಡಿ, ಜನರ ಮನೆಗಳಿಗೆ ಭೇಟಿಯನ್ನು ನೀಡುವ ಮೂಲಕ ಜನರ ಸಮಸ್ಯೆಗಳನ್ನು ಅಧ್ಯಯನ ಮಾಡಬೇಕು. ವಿಶೇಷ ತರಗತಿಗಳ ಮೂಲಕ ಹೊಸ ಅರಿವನ್ನು ಪಡೆದುಕೊಳ್ಳಬೇಕು. ಜಾತಿ ಮತಗಳನ್ನು ಮೀರಿ ಒಗ್ಗಟ್ಟಾಗುವ ಮೂಲಕ ಜಾತ್ಯತೀತ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ಮೂಡಿ ಬರಬೇಕು ಎಂದು ಅವರು ನುಡಿದರು.
          ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜಿನ ಪ್ರಾಂಶುಪಾಲರೂ, ಎನ್. ಎಸ್. ಎಸ್. ಶಿಬಿರದ ಸಂಯೋಜಕರೂ ಆದ ಮೊಹಮ್ಮದ್ ಅಲಿ ಕೆ,  ಎಸ್. ಡಿ. ಪಿ. ಎ. ಯು. ಪಿ. ಶಾಲೆಯ ಮುಖ್ಯೋಪಾಧ್ಯಾಯಿನಿ ಸರೋಜಾ ಎಂ, ಮಾತೃ ಸಂಘದ ಅಧ್ಯಕ್ಷೆ ರಾಜೇಶ್ವರಿ, ಎಣ್ಮಕಜೆ ವಾರ್ಡ್ ಸದಸ್ಯರಾದ ಮಹೇಶ್ ಭಟ್, ಕುಸುಮಾವತಿ, ಶೇಣಿಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ವಿಲ್ಸನ್ ಡಿಸೋಜ ಸಭೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು. ಕಳೆದ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಶಿಬಿರಾರ್ಥಿಗಳಾಗಿ ಆಯ್ಕೆಯಾದ ಪವನ್ ಕುಮಾರ್ ಮತ್ತು ಭವ್ಯಾ ಅವರಿಗೆ ಬಹುಮಾನವನ್ನು ವಿತರಿಸಲಾಯಿತು. ಈ ಶೈಕ್ಷಣಿಕ ವರ್ಷದ ಉತ್ತಮ ಶಿಬಿರಾರ್ಥಿಗಳಾಗಿ ಆಯ್ಕೆಯಾದ ವಿನೀತ್ ರಾಜ್, ಜಾಮಿನ್ ಖದೀಜಾ ಮತ್ತು ಅಂಕಿತಾ ಅವರನ್ನು ಅಭಿನಂದಿಸಲಾಯಿತು.
        ಶೇಣಿಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಅಧ್ಯಾಪಕ ಡಾ. ಅನೀಶ್ ಕುಮಾರ್ ನಿರೂಪಿಸಿದರು. ಪ್ರಾಂಶುಪಾಲೆ ವಿಜಯಲಕ್ಷ್ಮಿ ಸ್ವಾಗತಿಸಿ ಎನ್. ಎಸ್. ಎಸ್. ಯೋಜನಾಧಿಕಾರಿ ಸಂತೋμï ಕುಮಾರ್ ಕ್ರಾಸ್ತ ವಂದಿಸಿದರು.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries