ಕೂದಲಿನ ಆರೋಗ್ಯ ವೃದ್ಧಿಸಬೇಕು, ನನ್ನ ಕೂದಲು ಯಾವುದೇ ಸಮಸ್ಯೆಯಿಲ್ಲದೆ ಸೊಂಪಾಗಿ ಇರಬೇಕೆಂದು ಬಯಸುತ್ತಿದ್ದೀರಾ? ಹಾಗಾದರೆ ದಾಸಾವಾಳದ ಮನೆಮದ್ದು ಟ್ರೈ ಮಾಡಿದ್ದೀರಾ?
ದಾಸವಾಳ ಕೂದಲಿಗೆ ಒಳ್ಳೆಯದು ಎಂದು ಹಿಂದಿನಿಂದಲೂ ಬಳಸುತ್ತಿದ್ದರೂ. ಇತ್ತೀಚಿನ ವರ್ಷಗಳಲ್ಲಿ ಶ್ಯಾಂಪೂ, ಕಂಡಿಷರ್ ಅಂತ ಬಳಸಲಾರಂಭಿಸಿದ ಮೇಲೆ ಇವುಗಳ ಬಳಕೆ ಮಾಡುವವರು ಕಡಿಮೆ.
ದಾಸವಾಳ ಹೂ ಹಾಗೂ ಕರಿಬೇವಿನ ಎಲೆಯಿಂದ ಕೂದಲಿನ ಆರೈಕೆ
ದಾಸವಾಳದ ಹೂ ನೈಸರ್ಗಿಕವಾದ ಕಂಡೀಷನರ್, ಇದು ಕೂದಲಿನ ಬುಡವನ್ನು ಬಲವಾಗಿಸುತ್ತೆ,
ಕರಿಬೇವಿನ ಎಲೆ ಕೂದಲಿನ ಬೆಳವಣಿಗೆಗೆ ಸಹಕಾರಿ, ಇವೆರಡು ಬಳಸಿ ಎಣ್ಣೆ ತಯಾರಿಸಿ
ಹಚ್ಚಿದರೆ ತುಂಬಾನೇ ಒಳ್ಳೆಯದು.
ಎಣ್ಣೆಯನ್ನು ಹಲವು ರೀತಿಯಲ್ಲಿ ತಯಾರಿಸಬಹುದು
ವಿಧಾನ 1
1/4 ಲೀಟರ್ ತೆಂಗಿನೆಣ್ಣೆ ಸಿಮ್‌ನಲ್ಲಿ ಬಿಸಿ ಮಾಡಿ ಅದಕ್ಕೆ 10-15 ದಾಸವಾಳದ ಹೂ ಹಾಗೂ
ಕರಿಬೇವಿನ ಎಲೆ ಹಾಕಿ ಬಿಸಿ ಮಾಡಿ, ಉರಿಯಿಂದ ಇಳಿಸಿ ತಣ್ಣಗಾದ ಮೇಲೆ ಸೋಸಿ ಬಾಟಲಿನಲ್ಲಿ
ಇಟ್ಟು ಬಳಸಿ.
ಸಲಹೆ : ಈ ಎಣ್ಣೆ ತುಂಬಾ ದಿನ ಇಟ್ಟರೆ ವಾಸನೆ ಬೀರಬಹುದು, ಆದ್ದರಿಂದ ವಾರಕ್ಕೆ ಅಥವಾ ತಿಂಗಳಿಗೆ ಆಗುವಷ್ಟು ಮಾಡಿ ಬಳಸಿ.
ವಿಧಾನ 2
* 10-15 ದಾಸವಾಳ ಎಲೆ ಹಾಗೂ 10-15 ಕರಿಬೇವಿನ ಎಲೆ, 1 ಚಮಚ ಎಣ್ಣೆ ಹಾಕಿ ರುಬ್ಬಿಕೊಳ್ಳಿ.
* ಈಗ 3 ಚಮಚ ತೆಂಗಿನೆಣ್ಣೆ ಬಿಸಿ ಮಾಡಿ ಅದಕ್ಕೆ ರುಬ್ಬಿದ ಮಿಶ್ರಣ ಹಾಕಿ1-2 ನಿಮಿಷ
ಬಿಸಿ ಮಾಡಿ ಆ ಎಣ್ಣೆ ತಲೆಗೆ ಹಚ್ಚಿದರೆ ಕೂದಲಿನ ಬುಡ ಸ್ಟ್ರಾಂಗ್ ಆಗುವುದು.
ವಿಧಾನ 3
ಕೂದಲಿನ ಆರೈಕೆಗೆ ಇನ್ನೂ ಹೆಚ್ಚಿನ ಪೋಷಕಾಂಶಗಳು
ಇನ್ನೂ ಹೆಚ್ಚಿನ ಕೂದಲಿನ ಆರೈಕೆಗೆ ಕರಿಬೇವು, ದಾಸವಾಳದ ಜೊತೆಗೆ ಮೆಂತೆ, ನೆಲ್ಲಿಕಾಯಿ,
ಕಹಿ ಬೇವು ಬಳಸಿದರೆ ಇನ್ನೂ ಒಳ್ಳೆಯದು. ನೀವು ಬೇಕಿದ್ದರೆ ನುಗ್ಗೆಕಾಯಿ ಹೂ ಕೂಡ
ಸೇರಿಸಬಹುದು.
ವಿಧಾನ 4
ದಾಸವಾಳದ ಹೂ, ದಾಸವಾಳ ಎಲೆ ಹಾಗೂ ಕರಿಬೇವು ಪೇಸ್ಟ್ ಮಾಡಿ 1 ಚಮಚ ಎಣ್ಣೆ, ಮೊಸರು ಜೊತೆ
ಮಿಕ್ಸ್ ಮಾಡಿ ತಲೆಗೆ ಮಾಸ್ಕ್ ರೀತಿ ಕೂಡ ಬಳಸಬಹುದು. ವಾರಕ್ಕೊಮ್ಮೆ ಈ ರೀತಿ ಮಾಡಿದರೆ
ಒಳ್ಳೆಯದು
ಈ ಎಣ್ಣೆ ನೀವು 6 ತಿಂಗಳವರೆಗೆ ಬಳಸುತ್ತಾ ಬಂದಾಗ ಕೂದಲು ಉದುರುವುದು ಕಡಿಮೆಯಾಗಿ ನಿಮ್ಮ ಕೂದಲು ಮತ್ತೆ ಹುಟ್ಟುವುದು. ಅಲ್ಲದೆ ಕೂದಲು ಮಾಯಿಶ್ಚರೈಸರ್‌ನಿಂದ ಕೂಡಿರುವುದರಿಂದ ಆಕರ್ಷಕವಾಗಿರುತ್ತದೆ.