ಕಾಸರಗೋಡು: ಕೋಯಿಕ್ಕೋಡ್, ಕಣ್ಣೂರು, ಕಾಸರಗೋಡು ಜಿಲ್ಲೆ ಒಳಗೊಂಡ ವಾಣಿಯ ಸಮುದಾಯ ಸಮಿತಿ ಉತ್ತರ ವಲಯ ಮಟ್ಟದ ಸಮಾವೇಶ ಮತ್ತು ಪ್ರತಿಭಾ ಸಂಗಮ ಜ. 8 ರಂದು ಕೋಟಿಕುಳಂಮ ಕರಿಪೆÇೀಡಿ ಶ್ರೀ ತಿರುರ್ ಮುಚ್ಚಿಲೋಟ್ ಶಕ್ತಿ ಸಭಾಂಗಣದಲ್ಲಿ ನಡೆಯಲಿದೆ. ಈ ಸಂದರ್ಭ 2021-22ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸೆಲ್ಸಿ, ಸಿಬಿಎಸ್, ಪ್ಲಸ್‍ಟು ಪರೀಕ್ಷೆಯ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ಸಂಘಟನೆ ರಾಜ್ಯ ಸಮಿತಿ ಅಧ್ಯಕ್ಷ ಚಂದ್ರನ್ ನಾಲಪ್ಪಾಡ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಂಘಟನೆ ರಾಜ್ಯಾಧ್ಯಕ್ಷ ಚಂದ್ರನ್ ನಾಲಪ್ಪಾಡ್ ಉತ್ತರ ಪ್ರಾಂತ ಸಮಾವೇಶವನ್ನು ಉದ್ಘಾಟಿಸುವರು. ರಾಜ್ಯ ಸಮಿತಿ ಸದಸ್ಯ ಮಾಧವನ ಚೆಂತಲಂ ಅಧ್ಯಕ್ಷತೆ ವಹಿಸುವರು. ಕಾಸರಗೋಡು ಸ್ಪೆಷಲ್ ಬ್ರಾಂಚ್ ಡಿವೈಎಸ್ಪಿ ಡಾ.ವಿ. ಬಾಲಕೃಷ್ಣ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಕರಿವೆಲ್ಲೂರ್ ವಲಿಯಾಚ್ಚನ್ ವಿ ಪ್ರಮೋದ್ ಕೊಮಾರಂ ಅನುಗ್ರಹ ಭಾಷಣ ಮಾಡುವರು. ರಾಜ್ಯ ಸಮಿತಿ ಸದಸ್ಯ ಬಾಲನ್ ಅಂಕ ಕಲರಿ, ಕರಿಪೆÇೀಡಿ ತಿರೂರು ಮುಚ್ಚಿಲೋಟ್ ಭಗವತಿ ದೇವಸ್ಥಾನ ಸಮಿತಿ ಅಧ್ಯಕ್ಷ ತಂಬಾನ್ ಚೆಡಿಕುನ್ನ್ ದೇವಸ್ಥಾನ ಸಮಿತಿ ಕಾರ್ಯದರ್ಶಿ ಅಂಬು ಞÉಕ್ಲಿ, ಮಾತೃ ಸಮಿತಿಯ ಕಾರ್ಯದರ್ಶಿ ಶೈನಾ ಅಂಬಂಗಾಟ್ ಪಾಲ್ಗೊಳ್ಳುವರು.
ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಉದ್ಯೋಗ ಮೀಸಲಾತಿ ವ್ಯವಸ್ಥೆಯಲ್ಲಿ ಬದಲಾವಣೆ ತಂದುಕೊಳ್ಳುವುದು, ಸಮಾಜೇತರ ಜಾತಿ ಗುಂಪುಗಳಿಗೆ ಮೀಸಲಾತಿಯನ್ನು ಒದಗಿಸುವ ಮೂಲಕ ಸಾಮಾಜಿಕ ನ್ಯಾಯವನ್ನು ಖಚಿತಪಡಿಸುವುದು, ಮೀಸಲಾತಿವ್ಯವಸ್ಥೆಯನ್ನು ಪರಿಷ್ಕರಿಸಲು ಹೊಸ ಆಯೋಗವನ್ನು ನೇಮಿಸಬೇಕು, ಹಿಂದುಳಿದ ಸಮುದಾಯಗಳ ಆರ್ಥಿಕವಾಗಿ ದುರ್ಬಲ ವರ್ಗದ ಹಿಂದುಳಿದವರಿಗೆ ಶೇ.10 ಮೀಸಲಾತಿಯನ್ನು ಒದಗಿಸುವುದು, ಹಿಂದುಳಿದ ಸಮುದಾಯಗಳಿಂದ ದೇವಸ್ಥಾನದ ಪರಿಚಾರಕರು, ಪರಿಕರ್ಮಿ ಮತ್ತು ಕೋಲಧಾರಿಗಳ ಮಾಸಿಕ ವೇತನಕ್ಕಾಗಿ ಹೊಸ ಅರ್ಜಿಗಳನ್ನು ಸ್ವೀಕರಿಸುವುದು, ಹೆಣ್ಣು ಮಕ್ಕಳ ಮದುವೆಗೆ ಮಾಂಗಲ್ಯ ಸಮುನ್ನತಿ ಯೋಜನೆ ಜಾರಿ ಬೇಡಿಕೆ ಈಡೇರಿಕೆಗಾಗಿ ಸಮಾವೇಶದಲ್ಲಿ ಠರಾವು ಮಂಡಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ವಿ.ನಾರಾಯಣನ್, ಕೋಶಾಧಿಕಾರಿ ಪಿ.ವಿ.ಮೋಹನನ್, ಕೆ.ಕುಞÂರಾಮನ್, ಕೆ. ತಂಬಾನ್, ಕೃಷ್ಣನ್ ಭಾಗವಹಿಸಿದ್ದರು.
ನಾಳೆ ವಾಣಿಯ ಸಮುದಾಯದ ಉತ್ತರ ಕೇರಳ ವಲಯ ಸಮಾವೇಶ, ಪ್ರತಿಭಾ ಪುರಸ್ಕಾರ
0
ಜನವರಿ 06, 2023
Tags