ಕುಂಬಳೆ: ಸರೋವರ ಕ್ಷೇತ್ರವೆಂದೇ ಖ್ಯಾತಿವೆತ್ತ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ತುಲು ಲಿಪಿ ನಾಮಫಲಕದ ಅನಾವರಣ ಸೋಮವಾರ ನಡೆಯಿತು. ದೇವಸ್ಥಾನದ ತುಳು ಲಿಪಿ ನಾಮಫಲಕದ ಉದ್ಘಾಟನೆಯನ್ನು ಅನಂತಪುರ ಕ್ಷೇತ್ರದ ಆಡಳಿತ ಮುಖ್ಯಸ್ಥ ಉದಯಕುಮಾರ್ ಗಟ್ಟಿ ನೆರವೇರಿಸಿದರು. ಕಾರ್ಯಕ್ರಮಕ್ಕೆ ಜೈ ತುಲುನಾಡು ಸಂಘಟನೆಯ ಉಪಾಧ್ಯಕ್ಷ ಹರಿಕಾಂತ್ ಸಾಲ್ಯಾನ್ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದರು.
ತುಳು ವಲ್ರ್ಡ್ ಮಂಗಳೂರು ಇದರ ಅಧ್ಯಕ್ಷ ರಾಜೇಶ್ ಆಳ್ವ, ಕಾರ್ಯದರ್ಶಿ ಭಾಸ್ಕರ ಕಾಸರಗೋಡು ಹಾಗೂ ತುಳು ಸಾಹಿತಿ, ಕವಿ ವಿಜಯರಾಜ್ ಪುಣಿಂಚಿತ್ತಾಯ ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೆ ಜೈ ತುಲುನಾಡು ಕಾಸರಗೋಡು ಘಟಕದ ಕಾರ್ಯದರ್ಶಿ ಕಾರ್ತಿಕ್ ಕೆ.ಎನ್. ಸ್ವಾಗತಿಸಿ, ಸಂಚಾಲ ಶ್ರೀನಿವಾಸ ಆಳ್ವ ಕಳತ್ತೂರು ವಂದಿಸಿದರು. ಜೊತೆ ಕಾರ್ಯದರ್ಶಿ ಜಗನ್ನಾಥ್ ಕುಲಾಲ್ ಹಾಗೂ ಖಜಾಂಜಿ ಉತ್ತಮ್ ಯು ಉಪಸ್ಥಿತರಿದ್ದರು.