ಬದಿಯಡ್ಕ: ಆತ್ಮ ವಿಶ್ವಾಸದಲ್ಲಿ ಸರಿದಾರಿಯಲ್ಲಿ ಸಾಗಿದಾಗ ಬದುಕು ಯಶಸ್ವಿ: ಎನ್.ಎ.ನೆಲ್ಲಿಕುನ್ನುಯಡ್ಕ: ಅನುಭವ ಮತ್ತು ಸತತ ಪ್ರಯತ್ನಗಳ ಮೂಲಕ ಗುರಿಯನ್ನು ಸಾಧಿಸಬಹುದು. ವಿದ್ಯಾರ್ಥಿಗಳಲ್ಲಿ ಜಾತ್ಯತೀತ ಮನೋಭಾವ ರೂಪುಗೊಳ್ಳಬೇಕು. ಜೀವನಪ್ರೀತಿಯಿಂದ ಅಂತರಂಗ ಗಟ್ಟಿಗೊಳ್ಳುತ್ತದೆ ಎಂದು ಕಾಸರಗೋಡು ಶಾಸಕ ಎನ್. ಎ. ನೆಲ್ಲಿಕುನ್ನು ಹೇಳಿದರು.
ಬದಿಯಡ್ಕದ ಹೋಲಿ ಫ್ಯಾಮಿಲಿ ಕಾನ್ವೆಂಟ್ ಶಾಲೆಯ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಮನೋಬಲವನ್ನು ಎಂದಿಗೂ ತ್ಯಜಿಸಬಾರದು. ಗುರಿ ಸ್ಪಷ್ಟವಿದ್ದು ಸರಿದಾರಿಯಲ್ಲಿ ಸಾಗಿದಾಗ ಬದುಕಿಗೆ ಅರ್ಥ ದೊರಕುತ್ತದೆ. ಅದಕ್ಕೆ ಆತ್ಮ ವಿಶ್ವಾಸ ಮುಖ್ಯ ಎಂದರು.
ತಲಶೇರಿ ಪ್ರಾಂತೀಯ ಮಟ್ಟದ ಮುಖ್ಯ ಧರ್ಮಗುರು ರೆವರೆಂಡ್ ಫಾದರ್ ಜೋಸೆಫ್ ಒಟ್ಟಪ್ಲಾಕಲ್ ಆಶೀರ್ವಚನವನ್ನು ನೀಡಿದರು. ವಿಜಿಲೆನ್ಸ್ ವಿಭಾಗದ ವೃತ್ತ ನಿರೀಕ್ಷಕರೂ ಚಲನಚಿತ್ರ ಕಲಾವಿದರೂ ಆದ ಸಿಬಿ ಥಾಮಸ್ ದಿಕ್ಸೂಚಿ ಭಾಷಣವನ್ನು ಮಾಡಿದರು. ಉಪ ಪ್ರಾಂಶುಪಾಲೆ ಸಿಸ್ಟರ್ ಸಂಗೀತಾ ಮತ್ತು ಅಧ್ಯಾಪಕ ಸಂಘದ ಕಾರ್ಯದರ್ಶಿ ಶ್ರೀಮತಿ ಶಿಜಿನಾ ಎನ್. ಬಿ. ವಾರ್ಷಿಕ ವರದಿಯನ್ನು ವಾಚಿಸಿದರು.
ನವಜೀವನ ಸ್ಪೆಷಲ್ ಸ್ಕೂಲಿನ ನಿರ್ದೇಶಕರಾದ ರೆವರೆಂಡ್ ಫಾದರ್ ಜೋಸ್ ಚೆಂಬೊಟ್ಟಿಕ್ಕಲ್ ಅವರು ಡಿಜಿಟಲ್ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಪಾಲಕ್ಕಾಡಿನ ಮರಿಯನ್ ಪ್ರಾಂತೀಯ ವಿಭಾಗದ ಸಿಸ್ಟರ್ ಜಾನ್ಸಿ ಮರಿಯ ಅವರು ಶಾಲೆಯ ನವೀಕೃತ ಲೋಗೋವನ್ನು ಅನಾವರಗೊಳಿಸಿದರು. ಬದಿಯಡ್ಕದ ಮಾರ್ತೋಮ ಕಾಲೇಜಿನ ನಿರ್ದೇಶಕ ರೆವರೆಂಡ್ ಫಾದರ್ ಮಾಥ್ಯೂ ಸಾಮ್ಯುವೆಲ್, ಬದಿಯಡ್ಕ ಹೋಲಿ ಫ್ಯಾಮಿಲಿ ಕಾನ್ವೆಂಟ್ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರೂ ಸಮಾಜ ಸೇವಕರೂ ಆದ ಮಾಹಿನ್ ಕೇಳೋಟ್ ಅವರು ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಎನ್. ಎ. ನೆಲ್ಲಿಕುನ್ನು ಶಾಲೆಯಲ್ಲಿ ಹೊಸತಾಗಿ ನಿರ್ಮಿಸಿದ ಗೇಟನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು. ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶಾಲೆಯ ಪ್ರಾಂಶುಪಾಲೆ ಸಿಸ್ಟರ್ ರೋಸ್ಲಿನ್ ಮಾಥ್ಯೂ ಸ್ವಾಗತಿಸಿ ವಿದ್ಯಾರ್ಥಿಗಳ ನಾಯಕಿ ಕುಮಾರಿ ಆನ್ ರಿಯಾ ಡಿಸೋಜ ವಂದಿಸಿದರು.