HEALTH TIPS

ಹಣದುಬ್ಬರ ಕುರಿತ ರಿಸರ್ವ್‌ ಬ್ಯಾಂಕ್‌ ಪತ್ರ ಬಹಿರಂಗಗೊಳಿಸಲು ನಿರಾಕರಿಸುತ್ತಿರುವ ಆರ್‌ಬಿಐ ಮತ್ತು ಕೇಂದ್ರ ಸರಕಾರ

                ವದೆಹಲಿ:ಹಣದುಬ್ಬರ ಮಿತಿ ಕುರಿತಂತೆ ಸತತ ಮೂರು ತ್ರೈಮಾಸಿಕಗಳಲ್ಲಿ ಗುರಿ ತಲುಪಲು ಆರ್‌ಬಿಐ ವಿಫಲವಾಗಿರುವ ಕುರಿತು ಕೇಂದ್ರ ಸರ್ಕಾರಕ್ಕೆ ಆರ್‌ಬಿಐ ಬರೆದಿರುವ ಪತ್ರದ ಕುರಿತು ಆರ್‌ಬಿಐ ಹಾಗೂ ಸರ್ಕಾರ ಎರಡೂ ಗೌಪ್ಯತೆ ಕಾಪಾಡಿವೆ.

                  ಈ ಪತ್ರವನ್ನು ಬಹಿರಂಗಪಡಿಸದೇ ಇರುವುದಕ್ಕೆ ಆರ್‌ಟಿಐ ಕಾಯಿದೆಯಲ್ಲಿ ಇರುವ ವಿನಾಯಿತಿಯ ಕಾರಣವನ್ನು ಆರ್‌ಬಿಐ ನೀಡಿದ್ದರೆ ಈ ರೀತಿಯ ಪತ್ರಗಳನ್ನು ಬಹಿರಂಗಪಡಿಸಲು ಆರ್‌ಬಿಐ ಕಾಯಿದೆಯಡಿ ಯಾವುದೇ ಅವಕಾಶವಿಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ.

                   ಸರಾಸರಿ ಹಣದುಬ್ಬರವು ಜನವರಿಯಿಂದ ಸೆಪ್ಟೆಂಬರ್‌ 2022 ರ ಅವಧಿಯಲ್ಲಿ ಸತತ ಮೂರು ತ್ರೈಮಾಸಿಕಗಳಲ್ಲಿ ತಾಳಿಕೊಳ್ಳಬಹುದಾದ ಮಿತಿಗಿಂತ ಹೆಚ್ಚಾಗಿತ್ತು. 2016 ರಲ್ಲಿ ತಿದ್ದುಪಡಿ ಕಂಡ ಆರ್‌ಬಿಐ ಕಾಯಿದೆ 1934 ಅನ್ವಯ ಈ ಕುರಿತಂತೆ ತನ್ನ ವೈಫಲ್ಯಕ್ಕೆ ಕಾರಣಗಳನ್ನು ಆರ್‌ಬಿಐ ಸರ್ಕಾರಕ್ಕೆ ನೀಡಬೇಕಿದೆಯಲ್ಲದೆ ಈ ಗುರಿಗಳನ್ನು ಯಾವಾಗ ಮತ್ತು ಹೇಗೆ ತಲುಪಲಾಗುವುದು ಎಂಬ ಬಗ್ಗೆ ವಿವರಣೆ ನೀಡಬೇಕೆಂದು ಹೇಳುತ್ತದೆ.

               ಆರ್‌ಬಿಐ ಕಾಯಿದೆ 1934 ಇದರ ಸೆಕ್ಷನ್‌ 45 ಝೆಡ್‌ಎನ್‌ ಮತ್ತು ಆರ್‌ಬಿಐ ಹಣಕಾಸು ನೀತಿ ಸಮಿತಿ ಮತ್ತು ಹಣಕಾಸು ನೀತಿ ಪ್ರಕ್ರಿಯೆ ನಿಯಮಾವಳಿಗಳು 2016 ಇದರ ನಿಯಮಾವಳಿ 7 ಅನ್ವಯ ಸರ್ಕಾರಕ್ಕೆ ವರದಿ ನೀಡಿದೆ ಆದರೆ ಈ ನಿಬಂಧನೆಗಳ ಪ್ರಕಾರ ಈ ವರದಿಯನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ,: ಎಂದು ಲೋಕಸಭೆಗೆ ಕಳೆದ ವರ್ಷದ ನವೆಂಬರಿನಲ್ಲಿ ವಿತ್ತ ರಾಜ್ಯ ಸಚಿವ ಪಂಕಚ್‌ ಚೌಧುರಿ ತಿಳಿಸಿದ್ದರು.

                ಆರ್‌ಬಿಐ ಕೂಡ ಈ ಪತ್ರವನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಆರ್‌ಟಿಐ ಕಾಯಿದೆಯ ಸೆಕ್ಷನ್‌ 8(1)(ಎ) ಉಲ್ಲೇಖಿಸಿ ತಿಳಿಸಿತ್ತು.

               ಆದರೆ ಈ ಪತ್ರ ಬಹಿರಂಗಪಡಿಸಲು ಆರ್‌ಬಿಐಗೆ ಸರ್ಕಾರದ ಅನುಮತಿ ಬೇಕಾಗಬಹುದು ಎಂದು ಕಾನೂನು ತಜ್ಞರು ತಿಳಿಸುತ್ತಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries