HEALTH TIPS

ಬೆಳಗ್ಗೆ ಎದ್ದಾಗ ತುಂಬಾ ಸೀನು ಬರುವುದೇ? ಕಾರಣವೇನು, ಮನೆಮದ್ದೇನು?

 

ಕೆಲವರಿಗೆ ಬೆಳಗ್ಗೆ ಎದ್ದ ತಕ್ಷಣ ನಿರಂತರ ಸೀನು, ಅಕ್ಷಿ... ಅಕ್ಷಿ ಅಂತ ಹೇಳಿ ಸುಸ್ತಾಗಿ ಬಿಡುವಷ್ಟು ಸೀನು ಬರುವುದು. ಏಕೆ ಈ ರೀತಿಯ ಸೀನು ಉಂಟಾಗುವುದು?ಈ ಸೀನು ಸಾಮಾನ್ಯವಾಗಿ ಬರುವುದೇ ಅಥವಾ ಏನಾದರೂ ಆರೋಗ್ಯ ಸಮಸ್ಯೆಯಿಂದಾಗಿ ಈ ರೀತಿ ಉಂಟಾಗುವುದೇ ಎಂದು ನೋಡೋಣ:

ಬೆಳಗ್ಗೆ ಎದ್ದಾಗ ಕಾಡುವ ಸೀನು

ಬೆಳಗ್ಗೆ ಎದ್ದ ತಕ್ಷಣ ನಿರಂತರ ಸೀನು ಉಂಟಾಗುವುದೇ, ಆತಂಕ ಪಡಬೇಕಾಗಿಲ್ಲ, ಅನೇಕ ಕಾರಣಗಳಿಂದ ಈ ರೀತಿ ಉಂಟಾಗುತ್ತದೆ, ಸಾಮಾನ್ಯವಾಗಿ ಈ ಕಾರಣಗಳಿಂದಾಗಿ ಸೀನು ಬರುತ್ತಿರಬಹುದು

ಸೈನಸ್

ಸೈನಸ್ ಸಮಸ್ಯೆ ಇರುವವರಿಗೆ ಬೆಳಗ್ಗೆ ಎದ್ದ ತಕ್ಷಣ ಸೀನು ಬರುವುದು. ಸೈನಸ್‌ ಸೋಂಕು ತುಂಬಾ ಸಾಮಾನ್ಯ, ಯಾರಲ್ಲಿ ಈ ಸೋಂಕು ಇದೆಯೋ ಅವರಿಗೆ ಬೆಳಗ್ಗೆ ಎದ್ದಾಗ ಸೀನು ಉಂಟಾಗುವುದು.

ಅಲರ್ಜಿ

ಕೆಲವರಿಗೆ ಅಲರ್ಜಿ ಸಮಸ್ಯೆ ಇರುತ್ತದೆ. ಕೆಲವೊಂದು ಸೀಸನ್‌ (ಕಾಲದಲ್ಲಿ)ನಲ್ಲಿ ಅಲರ್ಜಿ ಕಂಡು ಬರುವುದುಂಟು. ಕೆಲವರಿಗೆ ದೂಳು ಅಲರ್ಜಿ, ಇನ್ನು ಕೆಲವರಿಗೆ ಚಳಿಗಾಲದಲ್ಲಿ ಅಲರ್ಜಿ, ಈ ಬಗೆಯ ಅಲರ್ಜಿ ಸಮಸ್ಯೆಯಿದ್ದರೆ ಆ ಸೀಸನ್‌ ಕಳೆಯುತ್ತಿದ್ದಂತೆ ಕಡಿಮೆಯಾಗಿ ಮತ್ತೆ ಮರುಕಳಿಸುವುದು.

ಮೂಗಿನಲ್ಲಿ ಉರಿಯೂತ

ಮೂಗಿನಲ್ಲಿ ಉರಿಯೂತದ ಸಮಸ್ಯೆಗೆ ವೈದ್ಯಕೀಯ ಭಾಷೆಯಲ್ಲಿ Vasomotor rhinitis ಎಂದು ಕರೆಯಲಾಗುವುದು. ದೇಹದ ಉಷ್ಣಾಂಶದಲ್ಲಿ ಬದಲಾವಣೆ ಉಂಟಾದಾಗ ಈ ರೀತಿಯಾಗುವುದು. ದೇಹದ ಉಷ್ಣತೆಯಲ್ಲಿ ಬದಲಾವಣೆಯಾದಾಗ ಅಥವಾ ಮಲಗಿದ್ದಾಗ ಇಮ್ಯೂನೆ ಆಕ್ಟಿವಿಟಿಯಲ್ಲಿ ಬದಲಾವಣೆಯಾದಾಗ ಬೆಳಗ್ಗೆ ಎದ್ದ ತಕ್ಷಣ ಸೀನು ಬರುವುದು

ಸೂರ್ಯನ ಬಿಸಿಲು ಬಿದ್ದಾಗ ಬರುವ ಸೀನು

ಇದನ್ನು ವೈದ್ಯಕೀಯ ಭಾಷೆಯಲ್ಲಿ ಫೋಟಿಕ್ ಸ್ನೀಜ್ ರಿಪ್ಲೆಕ್ಸ್ ಎಂದು ಕರೆಯಲಾಗುವುದು. ಈ ರೀತಿಯ ಸಮಸ್ಯೆ ಇರುವವರಿಗೆ ಸೀನು ಸಮಸ್ಯೆ ಇರುವವರಿಗೆ ಒಮ್ಮೆ ಕೆಮ್ಮು ಶುರುವಾದರೆ ಕಡಿಮೆಯಾಗುವುದೇ ಇಲ್ಲ.

 

ಬೆಳಗ್ಗೆ ಸೀನು ಉಂಟಾಗುವುದನ್ನು ತಡೆಗಟ್ಟುವುದು ಹೇಗೆ?

1. ನಿಮ್ಮ ಮನೆಯನ್ನು ಸ್ವಚ್ಛವಾಗಿಡಿ

ಮನೆಯಲ್ಲಿರುವ ದೂಳು ತೆಗೆಯಿರಿ, ಮನೆಯಲ್ಲಿ ಸಾಕು ಪ್ರಾಣಿಗಳಿದ್ದರೆ ಅವುಗಳ ರೋಮ ಮನೆಯೊಳಗಡೆ ಬಿದ್ದಿದ್ದರೆ ಸೀನು ಸಮಸ್ಯೆ ಹೆಚ್ಚುವುದು. ಸೀನು ಸಮಸ್ಯೆ ಇರುವವರು ಈ ಬಗ್ಗೆ ಎಚ್ಚರವಹಿಸಿ.

2. ಮೂಗನ್ನು ಚಿವುಟಿ

ಮೂಗನ್ನು ಚಿವುಟಿದಾಗ ಸೀನು ನಿಲ್ಲುತ್ತದೆ. ಆದರೆ ಇದು ಒಳ್ಳೆಯ ಐಡಿಯಾ ಅಲ್ಲ ಎಂದು ವೈದ್ಯರು ಎಚ್ಚರಿಸುತ್ತಾರೆ.

ಕಾರಣ ಕಂಡು ಹಿಡಿಯಿರಿ

ಬೆಳಗ್ಗೆ ಎದ್ದಾಗ ಯಾವ ಕಾರಣಕ್ಕೆ ಸೀನು ಬರುತ್ತಿದೆ? ದೂಳಿನಿಂದಲೇ ಅಥವಾ ತುಂಬಾ ತಂಪು ವಾತಾವರಣದಿಂದಲೇ ಕಾರಣ ತಿಳಿಯಿರಿ. ಮನೆಯನ್ನು ಸ್ವಚ್ಛವಾಗಿಡಿ, ತಂಪು ವಾತಾವರಣದ ಕಾರಣದಿಂದಾದರೆ ಮೈಯನ್ನು ಬೆಚ್ಚಗಿಡುವ ಉಡುಪು ಧರಿಸಿ.

ಸೀನು ತಡೆಗಟ್ಟಲು ಮನೆಮದ್ದು ಜೇನು ಬೆಳಗ್ಗೆ ಎದ್ದ ತಕ್ಷಣ ಒಂದು ಲೋಟ ಬಿಸಿ ನೀರಿಗೆ ಸ್ವಲ್ಪ ಜೇನು ಹಾಗೂ ನಿಂಬೆರಸ ಹಾಕಿ ಕುಡಿದರೆ ಸೀನು ಕಡಿಮೆಯಾಗುವುದು. ಆದರೆ ನಿಮಗೆ ಜೇನು ಅಲರ್ಜಿ ಇದ್ದರೆ ಸೇವಿಸಬೇಡಿ. ಒಂದು ವರ್ಷದೊಳಗಿನ ಮಕ್ಕಳಿಗೆ ಜೇನು ನೀಡಬೇಡಿ. ಅರಿಶಿಣ ನಿಮ್ಮ ಆಹಾರದಲ್ಲಿ ಅರಿಶಿಣ ಹೆಚ್ಚಾಗಿ ಬಳಸಿ ಅರಿಶಿಣ ಹಾಕಿದ ಹಾಲು ಕುಡಿಯಿರಿ ಕರಿಮೆಣಸು ಜೇನಿಗೆ ಸ್ವಲ್ಪ ಕರಿಮೆಣಸು ಹಾಕಿ ಕುಡಿಯಿರಿ, ಕಷಾಯ ಮಾಡಿ ಕುಡಿಯಬಹುದು. ಶುಂಠಿ ಶುಂಠಿ ರಸಕ್ಕೆ ಸ್ವಲ್ಪ ಜೇನು ಹಾಗೂ ಕರಿಮೆಣಸು ಸೇರಿಸಿ ತೆಗೆದುಕೊಂಡರೆ ಸೀನು ತಡೆಗಟ್ಟಬಹುದು. ಏರ್‌ ಫಿಲ್ಟರ್ ಬಳಸಿ ತುಂಬಾ ಅಲರ್ಜಿ ಸಮಸ್ಯೆಯಿದ್ದರೆ ಏರ್‌ ಫಿಲ್ಟರ್ ಬಳಸಿ. ಪ್ರಾಣಿಗಳ ಆರೈಕೆ ಮಾಡುವ ಜಾಗ್ರತೆವಹಿಸಿ * ಮನೆಯಲ್ಲಿರುವ ನಾಯಿ, ಬೆಕ್ಕನ್ನು ಮುಟ್ಟಿದ ತಕ್ಷಣ ಕೈಗಳನ್ನು ತೊಳೆಯಿರಿ. * ನಿಮ್ಮ ಮಲಗುವ ಬೆಡ್‌ಗೆ ಅಥವಾ ಕೂರುವ ಸೋಫಾದಲ್ಲಿ ಅವುಗಳನ್ನು ಕೂರಲು ಬಿಡಬೇಡಿ. (ಕೆಲವರಿಗೆ ನಾಯಿ, ಬೆಕ್ಕುಗಳೆಂದರೆ ತಮ್ಮ ಬೆಡ್‌ನಲ್ಲಿ ಮಲಗಿಸಿಕೊಳ್ಳುವಷ್ಟು ಪ್ರೀತಿ ಆದರೆ ಈ ಸಮಸ್ಯೆ ಇದ್ದರೆ ಸ್ವಲ್ಪ ಜಾಗ್ರತೆವಹಿಸಿ)



 

 

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries