ಕುಂಬಳೆ : ಕಾಸರಗೋಡು ಕುಲಾಲ ಸಂಘ ಕುಂಬಳೆ ಶಾಖೆಯಲ್ಲಿ ಭಾನುವಾರ ‘ಕುಲಾಲ ಕುಟುಂಬ ಸಂಗಮ’ ಹಾಗು ‘ಸಾಧಕರಿಗೆ ಸನ್ಮಾನ’ ಕಾರ್ಯಕ್ರಮವು ಜರಗಿತು.
ಶಾಖೆಯ ಅಧ್ಯಕ್ಷ ಗಂಗಾಧರ ಕೆ.ಟಿ ಯವರು ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ರವೀಂದ್ರ ಮುನ್ನಿಪ್ಪಾಡಿ ದೀಪ ಬೆಳಗಿಸಿ ಉದ್ಘಾಟಿಸಿದರು. ವಾಂತಿಚ್ಚಾಲ್ ಉಪ್ಲೇರಿ ಶ್ರೀ ಮಂತ್ರಮೂರ್ತಿ ಗುಳಿಗ ಸನ್ನಿಧಿಯ ಪ್ರಧಾನ ಕರ್ಮಿ ಗೋಪಾಲಕೃಷ್ಣ ಕುಲಾಲ್ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಕುಟುಂಬ ಸಂಗಮದ ಮಹತ್ವ ಹಾಗೂ ಕುಲಾಲ ಸಮುದಾಯಕ್ಕೆ ಸಮಾಜದಲ್ಲಿರುವ ಮಹತ್ವದ ಬಗ್ಗೆ ಮಾತನಾಡಿದರು.
ಸಾಹಿತಿ ಕುಶಾಲಾಕ್ಷಿ. ವಿ.ಕುಲಾಲ್ ಕಣ್ವತೀರ್ಥ, ಜಿ.ಪಂ. ಸದಸ್ಯೆ ಕಮಲಾಕ್ಷಿ ವರ್ಕಾಡಿ, ಕಾಸರಗೋಡು ಬ್ಲಾ.ಪಂ.ಸದಸ್ಯೆ ಜಯಂತಿ, ನಾರಾಯಣ ಕುಲಾಲ್ ನಾರಾಯಣಮಂಗಲ ಉಪಸ್ಥಿತರಿದ್ದು ಶುಭಹಾರೈಸಿದರು. ಸಭೆಯಲ್ಲಿ ಕುಲಾಲ ಸಮಾಜದ ಹಿರಿಯ ಸಾಧಕರಾದ ಸಮಾಜದ ಗುರಿಕ್ಕಾರ ಶೇಷಪ್ಪ ಮೂಲ್ಯ ಮುಜುಂಗಾವು, ಹಿರಿಯ ಕೃಷಿಕ ಕುಂಞÂ ಮೂಲ್ಯ ತಂಙರಕಟ್ಟೆ, ಆಯುರ್ವೇದ ವೈದ್ಯ ಕಿಞ್ಞಣ್ಣ ಮೂಲ್ಯ ನಾರಾಯಣಮಂಗಲ, ಮಾಜಿ ಸೈನಿಕ ಯು.ಎಮ್ ಮೂಲ್ಯ ಓಡಗದ್ದೆ, ಸಮಾಜ ಸಂಘಟಕ ಸಂಕಪ್ಪ ಮಾಸ್ತರ್ ನಾಯ್ಕಾಪು ರನ್ನು ಸನ್ಮಾನಿಸಲಾಯಿತು. ಆಟೋಟ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಬಳಿಕ ಕುಲಾಲ ಪ್ರತಿಭೆಗಳಿಂದ ಕಲಾ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು. ಕುಲಾಲ ಬಾಂಧವರ ಸಹ ಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಕುಮಾರಿಯರಾದ ತನ್ವಿ ,ಸಾನ್ವಿ,ಪ್ರತೀಕ್ಷಾ ಭವ್ಯಕೃತಿ, ಚರಿμÁ್ಮ ಇವರುಗಳು ಪ್ರಾರ್ಥನೆ ಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಕೃಷ್ಣ ಕಳತ್ತೂರು ಸ್ವಾಗತಿಸಿ, ಅಶೋಕ ಪುಣಿಯೂರು ವಂದಿಸಿದರು. ಶ್ರೀನಿವಾಸ ಕಮಾರ್ತೆ ಕಾರ್ಯಕ್ರಮ ನಿರೂಪಿಸಿದರು.