ಕುಂಬಳೆ: ಎಸ್.ಕೆ.ಎಸ್.ಎಸ್.ಎಫ್. ಕುಂಬಳೆ ವಲಯದ ವಾರ್ಷಿಕ ಕೌನ್ಸಿಲ್ ಸಭೆ “ವಾರ್ಷಿಕ ಸಚಿವ ಸಂಪುಟ” ಪೆರಾಲ್‍ನ ಜಿಪಿಎಫ್ ರೆಸಾರ್ಟ್‍ನಲ್ಲಿ ನಡೆದು ಮುಕ್ತಾಯಗೊಂಡಿತು. 2022-24ನೇ ಸಾಲಿನ ಸಮಿತಿ ರಚಿಸಲಾಯಿತು. ಒಂದು ವರ್ಷದ ಚಟುವಟಿಕೆಗಳು ಮತ್ತು ಯೋಜನೆಗಳನ್ನು ಮೌಲ್ಯಮಾಪನ ಮಾಡಿ ವರದಿ ಮಂಡಿಸಿ ಮುಂದಿನ ಒಂದು ವರ್ಷದ ಯೋಜನೆಗಳನ್ನು ರೂಪಿಸಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಾರೂಕ್ ದಾರಿಮಿ ಕೊಲ್ಲಂಪಾಡಿ ಉದ್ಘಾಟಿಸಿದರು. ಝುಬೈರ್ ನಿಝಾಮಿ ಕಳತ್ತೂರು ನೇತೃತ್ವ ವಹಿಸಿದ್ದರು. ದುಬೈ ಮಂಜೇಶ್ವರ ಮಂಡಲ ಕಾರ್ಯದರ್ಶಿಯಾಗಿ ಫರ್ಶೀದ್ ಪೂಕಟ್ಟೆ ಅವರನ್ನು ಆಯ್ಕೆಮಾಡಲಾಯಿತು.
ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದಲ್ಲಿ ಫಿಸಿಯೋಥೆರಪಿ ಪದವಿ ಪಡೆದ ಬಿಲಾಲ್ ಆರಿಕ್ಕಾಡಿ, ರಾಜ್ಯ ಸಮಾವೇಶದಲ್ಲಿ ವಿಜೇತರಾದ ಹನೀಫ್ ಪೇರಾಲ್, ಶಾಕಿರ್ ಹುಸೇನ್ ಅಶಾಫಿ, ಅಫ್ಝಲ್ ಕಲ್ಲೂರಾವಿ, ಹಾಫಿಲ್ ಮುμÁ್ತಕ್, ಇಮಾಮ್ ಶಾಫಿ, ಅಕಾಡೆಮಿ ಯೂನಿಯನ್ ವಿಜೇತರಾದ ಇಮಾಮ್ ಶಾಫಿ, ಅಕಾಡಮಿ ಯೂನಿಯನ್ ಜಿಲ್ಲಾ ಮುಶಾರ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ದಾರುಲ್ ಉಲೂಮ್, ದರ್ಸ್ ವಿದ್ಯಾರ್ಥಿಗಳಿಗೆ ಟ್ರೋಫಿ ನೀಡಿ ಗೌರವಿಸಲಾಯಿತು.
ರಾಝೀಕ್ ಹುದವಿ ಪೇರಾಲ್ ಅಧ್ಯಕ್ಷತೆ ವಹಿಸಿದ್ದರು. ಸೈಯದ್ ಹಮ್ದುಲ್ಲಾ ತಂಙಳ್, ನಾಸರ್ ಫೈಝಿ, ಹುಸೈನ್ ಉಳುವಾರ್, ಮೂಸಾ ನಿಝಾಮಿ, ಮೂಸಾ ಫೈಝಿ, ಅಮೀರ್ ಅಸ್ಶಾಫಿ, ಜಲಾಲ್ ಅಝ್ಹರಿ, ಜಮ್ಶೀರ್ ಮೈಮೂನ್ ನಗರ ಮಾತನಾಡಿದರು. ಇಲ್ಯಾಸ್ ಹುದವಿ ಸ್ವಾಗತಿಸಿ, ಬಿಲಾಲ್ ಆರಿಕ್ಕಾಡಿ ವಂದಿಸಿದರು.
ಎಸ್.ಕೆ.ಎಸ್.ಎಸ್.ಎಫ್ ಕುಂಬಳೆ ಪ್ರದೇಶ ವಾರ್ಷಿಕ ಸಚಿವ ಸಂಪುಟ ಸಭೆ ಸಮಾರೋಪ
0
ಜನವರಿ 16, 2023
Tags