ನವದೆಹಲಿ:ಭಾರತೀಯ ಕಂಪೆನಿಯಾಗಿರುವ ಮೇಯ್ಡನ್ ಫಾರ್ಮಾಸೂಟಿಕಲ್ಸ್ ತಯಾರಿಸಿದ ಕೆಮ್ಮಿನ ಸಿರಲ್ ಸೇವಿಸಿ ಗ್ಯಾಂಬಿಯಾದಲ್ಲಿ 70 ಮಕ್ಕಳು ಸಾವಿಗೀಡಾಗಿದ್ದಾರೆಂಬ ಆರೋಪಗಳನ್ನು ಭಾರತ ಸರ್ಕಾರ ನೇಮಿತ ಸಮಿತಿ ತಳ್ಳಿ ಹಾಕಿರುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಒಪ್ಪಿಲ್ಲ ಎಂದು thewire.in ವರದಿ ಮಾಡಿದೆ.
ಮಕ್ಕಳ ಸಾವಿಗೂ ಕಂಪನಿಯ ನಾಲ್ಕು ಉತ್ಪನ್ನಗಳಿಗೂ ಯಾವುದೇ ಸಂಬಂಧವಿಲ್ಲವೆಂದ ಹೇಳಿ ಭಾರತ ಸರಕಾರ ರಚಿಸಿದ ನಾಲ್ಕು ಸದಸ್ಯರ ಸಮಿತಿ ಡಿಜಿಸಿಐಗೆ ವರದಿ ಸಲ್ಲಿಸಿತ್ತು, ವಿಶ್ವ ಆರೋಗ್ಯ ಸಂಸ್ಥೆ ಕೇವಲ ನಾಲ್ಕು ಉತ್ಪನ್ನಗಳ ಲ್ಯಾಬ್ ವರದಿ ನೀಡಿದೆ. ಆದರೆ ವಿವಾದಕ್ಕೀಡಾಗಿರುವ 17 ಇತರ ಉತ್ಪನ್ನಗಳನ್ನು ಪರೀಕ್ಷೆಗೊಳಪಡಿಸಲಾಗಿದೆಯಾದರೂ ಅವುಗಳ ವರದಿ ನೀಡಿಲ್ಲ ಎಂದು ಸಮಿತಿ ಹೇಳಿದೆ.
ಮೇಯ್ಡನ್ ಫಾರ್ಮಾದ ನಾಲ್ಕು ಉತ್ಪನ್ನಗಳ ಬಳಕೆಯ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಎಚ್ಚರಿಕೆ ನೀಡಿತ್ತೆಂಬುದನ್ನು ಇಲ್ಲಿ ಸ್ಮರಿಸಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಈ ನಾಲ್ಕು ಉತ್ಪನ್ನಗಳಲ್ಲಿ ಹಾನಿಕಾರಕ ಅಂಶಗಳಾದ diethylene glycol (DEG) and ethylene glycol (EG) ಇವೆ. ಆದರೆ ಒಟ್ಟು 23 ಮಾದರಿಗಳ ಪೈಕಿ 17 ಮಾದರಿಗಳ ಲ್ಯಾಬ್ ವರದಿಗಳನ್ನು ಬಹಿರಂಗಪಡಿಸಲಾಗಿಲ್ಲ, ಈ ಕೆಮ್ಮಿನ ಸಿರಪ್‌ಗಳೇ ಸಾವುಗಳಿಗೆ ಕಾರಣವೇ ಎಂದು ಹೇಳುವುದು ಕಷ್ಟ ಎಂದು ಸಮಿತಿ ಹೇಳಿದೆ ಎಂದು ವರದಿಯಾಗಿದೆ,
ಈ ಕುರಿತು ಪ್ರತಿಕ್ರಿಯಿಸಿರುವ ವಿಶ್ವ ಆರೋಗ್ಯ ಸಂಸ್ಥೆಯ ವಕ್ತಾರರು, 23 ಮಾದರಿಗಳನ್ನು ಪರೀಕ್ಷಿಸಲಾಗಿದ್ದು ಹಾಗೂ ಎಲ್ಲಾ ವರದಿಗಳನ್ನು ಭಾರತದ ಪ್ರಾಧಿಕಾರಗಳಿಗೆ ನೀಡಲಾಗಿದೆ. ಕೇವಲ 4 ಮಾದರಿಗಳಲ್ಲಿ ಹಾನಿಕಾರಕ ಅಂಶಗಳಿದ್ದವು, ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಕ್ತಾರರು ಹೇಳಿದ್ದಾರೆ.