ಕಾಸರಗೋಡು: ತಲಪ್ಪಾಡಿ ಸನಿಹ ಕೊಲ್ಯದ ಅಡ್ಕದಲ್ಲಿ ಕಾರು ರಸ್ತೆಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಕಾರಿನಲ್ಲಿದ್ದ ಮಂಜೇಶ್ವರ ಉದ್ಯಾವರ ಹತ್ತನೇಮೈಲಿ ನಿವಾಸಿ ಅಬ್ದುಲ್ ರಿಫಾಯಿ(22)ಮೃತಪಟ್ಟಿದ್ದಾರೆ. ಜತೆಗಿದ್ದ ಸಹೋದರ ಮತ್ತು ಇತರ ಇಬ್ಬರು ಯುವತಿಯರೂ ಗಾಯಗೊಂಡಿದ್ದಾರೆ.
ಡಿಕ್ಕಿಯಾದ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿದೆ. ಅಬ್ದುಲ್ ರಿಫಾಯಿ ಅವರ ಸಂಬಂದಿ, ಮಂಗಳೂರಿನಲ್ಲಿ ವಿದ್ಯಾರ್ಥಿಯಾಗಿರುವ ಬಶೀರ್ ಅಹಮ್ಮದ್ ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಭಾನುವಾರ ರಾತ್ರಿ ಅಪಘಾತ ಸಂಭವಿಸಿದೆ. ಇವರ ಜತೆಗಿದ್ದ ಬಶೀರ್ ಅಹಮ್ಮದ್ ಸಹಪಾಠಿಗಳಾದ ರೆವತಿ, ಕಣ್ಣೂರು ನಿವಾಸಿ ಫಾತಿಮಾ ಎಂಬವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಅಬ್ದುಲ್ ರಿಫಾಯಿ ಗಲ್ಫ್‍ನಲ್ಲಿ ಮೊಬೈಲ್ ಅಮಗಡಿ ವ್ಯಾಪಾರಿಯಾಗಿದ್ದು, ಶನಿವಾರವಷ್ಟೆ ಊರಿಗೆ ಆಗಮಿಸಿದ್ದರು.
ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಕಾರು: ಯುವಕ ಮೃತ್ಯು, ಇಬ್ಬರು ಯುವತಿಯರ ಸಹಿತ ಮೂವರಿಗೆ ಗಾಯ
0
ಜನವರಿ 30, 2023