ಪೆರ್ಲ: ರಾಜಾಪುರ ಸಾರಸ್ವತ ಸಂಘ ಕಾಸರಗೋಡು ಹಾಗೂ ಬಾಲಾವಲೀಕರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ ಪುತ್ತೂರು ಇದರ ಶತಮಾನೋತ್ಸವ ಸಮಿತಿ ಸಂಯುಕ್ತ ಆಶ್ರಯದಲ್ಲಿ "ಸಾರಸ್ವತ ಸಂಗಮ- ಶತ ಸಂಭ್ರಮ" ಎಂಬ ಕಾರ್ಯಕ್ರಮ ಶೇಣಿ ಶ್ರೀಶಾರದಾಂಬ ಶಾಲಾ ವಠಾರದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಭಾನುವಾರ ಜರಗಿತು.
ಸಮಾರಂಭದ ಅಂಗವಾಗಿ ನಡೆದ ಸಭಾ ಸಮಾರಂಭವನ್ನು ಶತಮಾನೋತ್ಸವ ಸಮಿತಿ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಪುಣಚ ಉದ್ಘಾಟಿಸಿದರು. ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿ ಸರಸ್ವತೀ ನದಿ ಮೂಲದಿಂದ ಬಂದ ಈ ಸಮಾಜದ ಹಿರಿಯರು ಕಂಡ ಕನಸನ್ನು ನನಸಾಗಿಸಲು ಪ್ರತಿಯೋರ್ವರು ಕಂಕಣಬದ್ಧರಾಗಬೇಕಿದ್ದು, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ರೀತಿಯಲ್ಲಿ ಅಭಿವೃದ್ಧಿ ಹೊಂದಲು ಪರಸ್ಪರ ಸಹಕಾರ ಅಗತ್ಯ ಎಂದರು.
ರಾಜಾಪುರ ಸಾರಸ್ವತ ಸಂಘದ ಅಧ್ಯಕ್ಷ ಕುಂಡೇರಿ ಜಯಂತ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಮುಂದಾಳು ಗೀತಾ ವಾಗ್ಲೆ ಬಂಟಕಲ್ಲು ದಿಕ್ಸೂಚಿ ಭಾಷಣಗೈದರು. ಬಾಲಾವಲೀಕರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಆಜೇರು ಬಾಲಕೃಷ್ಣ ನಾಯಕ್, ಮೊಗೇರು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ರಾಮಚಂದ್ರ ನಾಯಕ್ ಆಳ್ಚಾರ್, ಶೇಣಿ ಶಾಲಾ ಪ್ರಬಂಧಕಿ ಶಾರದಾ ವೈ, ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷ ಮುಕುಂದ ನಾಯಕ್ ಶೇಣಿ ತೋಟದಮನೆ,
ಆರ್.ಎಸ್.ಬಿ.ಯುವ ಸಂಘದ ಗೌರವಾಧ್ಯಕ್ಷ ರಘರಾಮ ಬೋರ್ಕರ್ ಶೇಣಿ, ಬಾಲಾವಲೀಕರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘದ ಪದಾಧಿಕಾರಿಗಳಾದ ನಾರಾಯಣ ನಾಯಕ್, ಹರೀಶ್ ಬೋರ್ಕರ್ ಕತ್ತಲಕಾನ, ರಮೇಶ ಪ್ರಭು ಸಂಪ್ಯ ಸಭೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕೋಟಿಗದ್ದೆ ಜನಾರ್ಧನ ನಾಯಕ್ (ಕೃಷಿ),ಸೋಮಶೇಖರ್ ಜೆ.ಎಸ್.(ಸಮಾಜ ಸೇವೆ),ಶ್ರೀದರ್ ನಾಯಕ್ ಶೇಣಿ (ಹೈನುಗಾರಿಕೆ ಕೃಷಿ),ಗೋವಿಂದ ನಾಯಕ್ ಮೊಗೇರು (ನಿವೃತ್ತ ಸೈನಿಕ),ಸುಬ್ರಾಯ ನಾಯಕ್ ಕಾನದಮೂಲೆ (ನಾಟಿವೈದ್ಯ),ಲಕ್ಷ್ಮಣ ಪ್ರಭು ಕರಿಂಬಿಲ (ಯಕ್ಷಗಾನ),ಗೋವಿಂದ ನಾಯಕ್ ಕುಕ್ಕಿಲ (ಹಿಮ್ಮೇಳ),ಸುರೇಶ್ ಪ್ರಭು ಕರಿಂಬಿಲ (ದಸ್ತಾವೇಜು), ಗುಣಾಜೆ ರಾಮಕೃಷ್ಣ ನಾಯಕ್ (ಉದ್ಯಮ), ಕುಕ್ಕಿಲ ಶ್ರೀಧರ್ ನಾಯಕ್ (ಶಿಕ್ಷಣ) ರಂಗದ ಸಾಧಕರಾಗಿ ಗುರುತಿಸಿ ಸನ್ಮಾನಿಸಲಾಯಿತು.ಶಂಕರ ಕಾಮತ್ ಚೇವಾರು ಪ್ರಾರ್ಥನೆಗೈದರು. ರವೀಂದ್ರನಾಥ ನಾಯಕ್ ಶೇಣಿ ತೋಟದಮನೆ ಸ್ವಾಗತಿಸಿ ನಾರಾಯಣ ನಾಯಕ್ ಗುರುವಾರೆ ವಂದಿಸಿದರು. ಶ್ರೀಧರ ನಾಯಕ್ ಕುಕ್ಕಿಲ,ಕಮಲಾಕ್ಷ ನಾಯಕ್ ಕೇರಿಮೂಲೆ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಕರಿಂಬಿಲ ಲಕ್ಷ್ಮಣ ಪ್ರಭು ನೇತೃತ್ವದಲ್ಲಿ ನುರಿತ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ತಾಳಮದ್ದಲೆ ಜರಗಿತು.