ನವದೆಹಲಿ: ಭಾರತದ ನೂತನ ರಾಯಭಾರಿಯಾಗಿ ಲಾಸ್ ಏಂಜಲೀಸ್‌ನ ಮಾಜಿ ಮೇಯರ್ ಎರಿಕ್ ಗಾರ್ಸೆಟ್ಟಿ ಅವರನ್ನು ಜೋ ಬೈಡನ್ ಸರ್ಕಾರ ಮತ್ತೆ ನೇಮಕ ಮಾಡಿದೆ.
ಗಾರ್ಸೆಟ್ಟಿ ಅವರನ್ನು ಭಾರತದ ರಾಯಭಾರಿಯಾಗಿ ನೇಮಕ ಮಾಡಲು ಬೈಡನ್ ಸರ್ಕಾರ 2021ರ ಜುಲೈ 9ರಂದು ತೀರ್ಮಾನಿಸಿತ್ತು.
ಆದರೆ, ಇದಕ್ಕೆ ಸೆನೆಟ್‌ನ ಅನುಮೋದನೆ ದೊರೆತಿರಲಿಲ್ಲ.
ಗಾರ್ಸೆಟ್ಟಿ ಮೇಯರ್ ಆಗಿದ್ದಾಗ, ಅವರ ಆಪ್ತ ಹಾಗೂ ಉನ್ನತ ಅಧಿಕಾರಿಯಾಗಿದ್ದ ರಿಕ್ ಜಾಕೋಬ್ಸ್ ಅವರು ತಮ್ಮ ಕಚೇರಿಯ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ್ದರು ಎನ್ನಲಾಗಿದೆ. ಈ ಕುರಿತು ಗಾರ್ಸೆಟ್ಟಿ ಅವರಿಗೆ ತಿಳಿದಿತ್ತು ಎಂಬ ಆರೋಪಗಳ ಹಿನ್ನೆಲೆಯಲ್ಲಿ ಅವರ ನೇಮಕಕ್ಕೆ ಆಗ ಅನುಮೋದನೆ ದೊರೆತಿರಲಿಲ್ಲ.
ಈಗ, ಗಾರ್ಸೆಟ್ಟಿ ಅವರನ್ನು ಬೈಡನ್ ಸರ್ಕಾರ ಮತ್ತೆ ನೇಮಕ ಮಾಡಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
'ಗಾರ್ಸೆಟ್ಟಿ ಅವರ ನೇಮಕದಿಂದ ಉದ್ಯೋಗ ಸ್ಥಳದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆಗೆ ಅನ್ಯಾಯ ಮಾಡಿದಂತಾಗಿದೆ' ಎಂದು 'ವಿಷಲ್‌ಬ್ಲೋವರ್ ಏಡ್' ಎಂಬ ಸಂಘಟನೆಯ ಸಿಇಒ ಲಿಬಿ ಲಿಯು ಅಸಮಾಧಾನ ವ್ಯಕ್ತಪಡಿಸಿದ್ದಾರೆ.