ಕಾಸರಗೋಡು: ಇತ್ತೀಚೆಗೆ ನಡೆದ ಅಂತರಾಷ್ಟ್ರೀಯ ಬೇಕಲ ಫೆಸ್ಟ್ ನಲ್ಲಿ ಒಂಟೆಯೊಂದು ಹೊಡೆದಿಂದ ಕೆಳ ದವಡೆಗೆ ಗಂಭೀರ ಗಾಯವಾಗಿ ಬಳಿಕ ಅಪೂರ್ವ ಶಸ್ತ್ರಚಿಕಿತ್ಸೆಗೆ ಒಳಗಾದ ಘಟನೆ ನಡೆದಿದೆ .
ಬೇಕಲ ಫೆಸ್ಟ್ ನಲ್ಲಿ ಎರಡು ಗಂಡು ಒಂಟೆಗಳು ಹೊಡೆದಾಡಿಕೊಂಡಿವೆ. ಒಂಟೆಯೊಂದರ ಕೆಳ ದವಡೆ ಮುರಿದು ಗಂಭೀರ ಸ್ಥಿತಿಯಲ್ಲಿತ್ತು.
ಕಾಞಂಗಾಡಿನ ಡಾ.ನಿತೀಶ್ ಮತ್ತು ಡಾ.ಜಿಷ್ಣು ಒಂಟೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಕಣ್ಣೂರಿನ ಡಾ.ಸರಿನ್.ಬಿ.ಸಾರಂಗ್ ನೇತೃತ್ವದಲ್ಲಿ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಒಂಟೆಗೆ ಮೂಳೆ ಮುರಿತಕ್ಕೆ ದವಡೆ ವೈರಿಂಗ್ ನಡೆಸಲಾಯಿತು.
ಶಸ್ತ್ರಚಿಕಿತ್ಸೆ ನಡೆಸಿದ ತಂಡದಲ್ಲಿ ಡಾ.ಸರಿನ್ ಬಿ.ಸಾರಂಗ್ ಅವರಲ್ಲದೆ, ವಿಸಿ ಗೋಪಿಕಾ, ಅಮಲ್ ಸುಧಾಕರನ್, ಅನಿಕಾ ಆಂಟೋನಿ ಮತ್ತು ಅರ್ಥಿ ಕೃಷ್ಣ ಇದ್ದರು. ಒಂಟೆಯ ಆರೋಗ್ಯ ಸ್ಥಿತಿ ಮೊದಲಿನ ಸ್ಥಿತಿಗೆ ಮರಳಲು ಕನಿಷ್ಠ ಎರಡು ತಿಂಗಳು ಬೇಕು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಬೇಕಲ ಫೆಸ್ಟ್ ವೇಳೆ ಹೊಡೆದಾಟ: ಕೆಳ ದವಡೆಯ ಗಾಯದಿಂದ ಒಂಟೆಗೆ ಶಸ್ತ್ರ ಚಿಕಿತ್ಸೆ, ರಾಜ್ಯದಲ್ಲಿ ಪ್ರಥಮ
0
ಜನವರಿ 12, 2023