ಅಮರಾವತಿ: ಆಂಧ್ರಪ್ರದೇಶದಲ್ಲಿ 6,400 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಪಿಎಚ್.ಡಿ ಪಡೆದ 10, ಎಂ.ಟೆಕ್‌ನ 930, ಎಂಬಿಎನ 5,284, ಎಂಎಸ್ಸಿಯ 4,365 ಹಾಗೂ ಎಲ್‌ಎಲ್‌ಬಿ ಪದವಿ ಪಡೆದ 94 ಮಂದಿ ಸೇರಿದಂತೆ ಒಟ್ಟು 5,03,486 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.
ಕಾನ್‌ಸ್ಟೆಬಲ್ ಹುದ್ದೆಗೆ ನಿಗದಿಪಡಿಸಿರುವ ವಿದ್ಯಾರ್ಹತೆ ಇಂಟರ್‌ಮೀಡಿಯೇಟ್. ಆದರೆ, ಅರ್ಜಿ ಸಲ್ಲಿಸಿದವರಲ್ಲಿ ಒಟ್ಟು 13,961 ಸ್ನಾತಕೋತ್ತರ ಪದವೀಧರರು ಹಾಗೂ 1,55,537 ಪದವೀಧರರು ಇದ್ದಾರೆ. ಈ ಹುದ್ದೆಗಳಿಗೆ ಭಾನುವಾರ ಲಿಖಿತ ಪರೀಕ್ಷೆ ನಡೆಯಲಿದೆ ಎಂದು ಪೊಲೀಸ್ ನೇಮಕಾತಿ ಮಂಡಳಿ ತಿಳಿಸಿದೆ.
ಒಟ್ಟು 5,03,486 ಅಭ್ಯರ್ಥಿಗಳ ಪೈಕಿ 3,95,415 ಪುರುಷರು ಮತ್ತು 1,08,071 ಮಹಿಳೆಯರಾಗಿದ್ದಾರೆ.