ಪ್ರಾಣಾಯಾಮ ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬುವುದು ವೈಜ್ಞಾನಿಕವಾಗಿ ಸಾಬೀತಾಗಿರುವ ಸತ್ಯ. ನೀವು ದಿನದಲ್ಲಿ ಐದೇ ಐದು ನಿಮಿಷ ಪ್ರಾಣಾಯಾಮ ಮಾಡಿದರೆ ಸಾಕು ಇಷ್ಟೆಲ್ಲಾ ಪ್ರಯೋಜನಗಳು ನಿಮ್ಮ ದೇಹಕ್ಕೆ ಸಿಗಲಿದೆ ನೋಡಿ:
ಪ್ರಾಣಾಯಾಮ ಮಾಡುವುದು ಹೇಗೆ?
ನಾಡಿಶುದ್ಧಿ ಪ್ರಾಣಾಯಾಮ:
ಮೊದಲು ನೀವು ಸುಖಾಸನದಲ್ಲಿ ಕುಳಿತುಕೊಳ್ಳಬೇಕು. ನಂತರ ಮೊದಲು ಎಡಭಾಗದಿಂದ ಉಸಿರನ್ನು
ತೆಗೆದುಕೊಳ್ಳಬೇಕು, ಆಗ ಬಲಭಾಗದ ಮೂಗಿನ ಹೊಳ್ಳೆ ಮುಚ್ಚಬೇಕು. ನಂತರ ನಿಧಾನಕ್ಕೆ
ಉಸಿರನ್ನು ಬಲಭಾಗದಿಂದ ಬಿಡಬೇಕು, ಈಗ ಬಲಭಾಗದಿಂದ ಉಸಿರನ್ನು ತೆಗೆಯಬೇಕು ಆಗ ಎಡಭಾಗದ
ಮೂಗಿನ ಹೊಳ್ಳೆ ಬೆರಳಿನಿಂದ ಮುಚ್ಚಬೇಕು, ನಂತರ ಎಡಭಾಗ ಮೂಗಿನಿಂದ ಉಸಿರನ್ನು ಬಿಡಬೇಕು, ಈ
ರೀತಿ ಎಡ-ಬಲ ಎಂಬಂತೆ 9 ಬಾರಿ, ನಂತರ ಎಡಭಾಗದಿಂದಲೇ ಉಸಿರನ್ನು ತೆಗೆದು ಎಡಭಾಗದಿಂದಲೇ
ಬಿಡಬೇಕು.
ಇತರ ಪ್ರಾಣಾಯಾಮಗಳು
ಕಪಾಲಭಾತೀ ಪ್ರಾಣಾಯಾಮ
ಉಜ್ವೈನಿ ಪ್ರಾಣಾಯಾಮ
ಶೀತಲೀ ಪ್ರಾಣಾಯಾಮ
ಭ್ರಮರಿ ಪ್ರಾಣಾಯಾಮ
1. ಮಾನಸಿಕ ಒತ್ತಡ ಹೋಗಲಾಡಿಸುತ್ತೆ
2013ರಲ್ಲಿ ನಡೆಸಿದ ಅಧ್ಯಯನ ವರದಿ ಪ್ರಕಾರ ಪ್ರಾಣಾಯಾಮ ಮಾಡುವುದರಿಂದ ನರಗಳು ಶಾಂತವಾಗಯವುದು, ಇದರಿಂದ ಮಾನಸಿಕ ಒತ್ತಡಕ್ಕೆ ಪ್ರತಿಕ್ರಿಯಿಸುವ ಶಕ್ತಿ ಹೆಚ್ಚಾಗುವುದು ಅಂದ್ರೆ ಹೆಚ್ಚಾಗಿ ಮಾನಸಿಕ ಉದ್ವೇಗ ಉಂಟಾಗುವುದಿಲ್ಲ. ಪ್ರಾಣಾಯಾಮ ಮಾಡುವುದರಿಂದ ದೇಹಕ್ಕೆ ಆಮ್ಲಜನಕದ ಪೂರೈಕೆ ಹೆಚ್ಚುವುದು.
2. ಒಳ್ಳೆಯ ನಿದ್ರೆ ಬರುತ್ತದೆ
ಎಷ್ಟೋ ಜನ ನಿದ್ದೆ ಬರುತ್ತಿಲ್ಲ ಎಂದು ಒದ್ದಾಡುತ್ತಾರೆ, ಪ್ರಾಣಾಯಾಮ ಮಾಡುವುದರಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಕ್ಲಿನಿಕಲ್ ಅಧ್ಯಯನ ಪ್ರಕಾರ ನೀವು 5 ನಿಮಿಷ ಭ್ರಮರಿ ಮಾಡಿದರೆ ನಿಮ್ಮ ಉಸಿರಾಟದ ಕ್ರಿಯೆ ಹಾಗೂ ಹೃದಯ ಬಡಿತ ನಿಧಾನವಾಗುವುದು, ಕಣ್ಣಿಗೆ ಒಳ್ಳೆಯ ನಿದ್ದೆ ಹತ್ತುವುದು.
3. ಮನಸ್ಸು ಶಾಂತವಾಗುವುದು
ನಾವೆಲ್ಲಾ ಪ್ರತಿಕ್ಷಣ ಉಸಿರಾಡುತ್ತೇವೆ, ಆದರೆ ಆ ಕ್ರಿಯೆ ಬಗ್ಗೆ ಗಮನ ಕೊಡುವುದಿಲ್ಲ, ಅದರ ಪಾಡಿಗೆ ನಡೆಯುತ್ತಿರುತ್ತದೆ. ಅದೇ ನೀವು ಪ್ರಾಣಾಯಾಮ ಅಭ್ಯಾಸ ಮಾಡುವಾಗ ಉಸಿರಾಟದ ಕ್ರಿಯೆ ಕಡೆಗೆ ನಿಮ್ಮ ಗಮನ ಹರಿಸುತ್ತೀರಿ. ಸಂಶೋಧಕರು ಹೇಳುವ ಪ್ರಕಾರ ಪ್ರಾಣಾಯಾಮ ಅಭ್ಯಾಸ ಮಾಡಿದಾಗ ದೇಹಕ್ಕೆ ಹೆಚ್ಚು ಆಮ್ಲಜನಕ ಪೂರೈಕೆಯಾಗುವುದು, ಇಂಗಾಲದ ಡೈಯಾಕ್ಸೈಡ್ ಹೆಚ್ಚಾಗಿ ಹೊರ ಹಾಕಲಾಗುವುದು, ಇದರಿಂದ ಮನಸ್ಸಿಗೆ ತುಂಬಾನೇ ವಿಶ್ರಾಂತಿಯ ಅನುಭವ ಉಂಟಾಗುವುದು ಅಲ್ಲದೆ ಆಲೋಚನೆಗಳು ಧನಾತ್ಮಕವಾಗಿರುತ್ತದೆ.
4. ಅತ್ಯಧಿಕ ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ
ಅತ್ಯಧಿಕ ರಕ್ತದೊತ್ತಡ ನಿಯಂತ್ರಣ ಮಾಡುವಲ್ಲಿ 5 ನಿಮಿಷದ ಪರಿಣಾಮಕಾರಿ. 2014ರಲ್ಲಿ ಒಂದು ಅಧ್ಯಯನ ನಡೆಸಲಾಯಿತು. ಅದರಲ್ಲಿ ಅತ್ಯಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ರೋಗಿಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಯಿತು, ಅದರಲ್ಲಿ ಒಮದು ಗುಂಪಿನವರಿಗೆ ರಕ್ತದೊತ್ತಡ ನಿಯಂತ್ರಣಕ್ಕೆ ಮೈಲ್ಡ್ ಟ್ಯಾಬ್ಲೆಟ್ ನೀಡಲಾಯಿತು, ಇನ್ನೊಂದು ಗುಂಪಿಗೆ ಪ್ರಾಣಾಯಾಮ ಅಭ್ಯಾಸ ಮಾಡಲಾಯಿತು. ಆ ಅಧ್ಯಯನದಲ್ಲಿ ತಿಳಿದು ಬಂದ ಅಂಶವೆಂದರೆ ಪ್ರಾಣಾಯಾಮ ಮಾಡಿದವರಲ್ಲಿ ರಕ್ತದೊತ್ತಡ ಸಂಪೂರ್ಣ ನಿಯಂತ್ರಣದಲ್ಲಿತ್ತು.
5. ಶ್ವಾಸಕೋಶದ ಆರೋಗ್ಯಕ್ಕೆ ಒಳ್ಳೆಯದು
ಪ್ರಾಣಾಯಾಮ ಮಾಡುವುದರಿಂದ ಶ್ವಾಸಕೋಶದ ಆರೋಗ್ಯ ಉತ್ತಮವಾಗುವುದು ಎಂದು 2019ರಲ್ಲಿ ನಡೆಸಿದ ಅಧ್ಯಯನದಿಂದ ಸಾಬೀತಾಗಿದೆ. ಈ ಅಧ್ಯಯನದಲ್ಲಿ ಯಾರಲ್ಲಿ ಅಸ್ತಮಾ, ಅಲರ್ಜಿ, ನ್ಯೂಮೋನಿಯಾ, ಕ್ಷಯರೋಗ ಸಮಸ್ಯೆ ಇದೆಯೋ ಅವರಿಗೆ ಪ್ರತಿದಿನ ಒಂದು ಗಂಟೆಯಂತೆ ವಾರದಲ್ಲಿ 6 ದಿನ ಮಾಡಿಸಲಾಯಿತು, ಅವರ ಆರೋಗ್ಯದಲ್ಲಿ ತುಂಬಾನೇ ಚೇತರಿಕೆ ಕಂಡು ಬಂತು.
6. ಬುದ್ಧಿಶಕ್ತಿಗೆ ತುಂಬಾನೇ ಒಳ್ಳೆಯದು
2013ರಲ್ಲಿ ನಡೆಸಿದ ಅಧ್ಯಯನ ನಡೆಸಲಾಯಿತು, ಅದರಲ್ಲಿ ಭಾಗವಹಿಸಿದವರಿಗೆ 12 ವಾರಗಳ ಕಾಲ ಪ್ರತಿದಿನ ಪ್ರಾಣಾಯಾಮ ಮಾಡಲಾಯಿತು. ಅವರಲ್ಲಿ ನೆನಪಿನ ಶಕ್ತಿ, ಯೋಚಿಸುವ ಸಾಮರ್ಥ್ಯ ಇವೆಲ್ಲಾ ಹೆಚ್ಚಾಗಿರುವುದು ತಿಳಿದು ಬಂತು. ಪ್ರತಿದಿನ ಪ್ರಾಣಾಯಾಮ ಮಾಡಿದರೆ ವಯಸ್ಸಾದಾಗ ಕಾಡುವ ಅಲ್ಜೈಮರ್ಸ್ ಸಮಸ್ಯೆ ಕೂಡ ತಡೆಗಟ್ಟಬಹುದು.