ಕೋಟಾ: ಕೋಟಾದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 'ಭಾನುವಾರದಂದು ಅಧ್ಯಯನ ಮಾಡಬೇಡಿ' ಎಂದು ಹೇಳಿ ಎಲ್ಲರನ್ನೂ ಒಮ್ಮೆ ನಗೆಗಡಲಲ್ಲಿ ತೇಲಿಸಿದರು. 'ಆದರೆ ಉತ್ತಮ ಸಾಧನೆ ಮಾಡಿ ಮತ್ತು ದೇಶದ ಭವಿಷ್ಯದ ನಾಯಕರಾಗಲು ಗಮನಹರಿಸಿ' ಎಂದು ಸಲಹೆ ಕೂಡ ನೀಡಿದರು.
'ಭಾನುವಾರದಂದು ಅಧ್ಯಯನ ಮಾಡಬೇಡಿ' ಎಂದು ನಿರ್ಮಲಾ ಸೀತಾರಾಮನ್ ಸಚಿವರನ್ನು ಕಂಡು ಖುಷಿಯಾಗಿದ್ದ ವಿದ್ಯಾರ್ಥಿಗಳ ಗುಂಪಿಗೆ ಹೇಳಿದರು. ವಿದ್ಯಾರ್ಥಿಗಳು ಅವರನ್ನು ಭೇಟಿಯಾಗಲು ಭಾನುವಾರದಂದು ಒಟ್ಟುಗೂಡಿದ್ದಾರೆ ಎಂದು ತಿಳಿದಾಗ, ಸಚಿವರು 'ನಿಮ್ಮೆಲ್ಲರನ್ನು ಇಲ್ಲಿ ನೋಡಲು ತುಂಬಾ ಸಂತೋಷವಾಗಿದೆ. ಮುಂಬರುವ ಪ್ರವೇಶ ಪರೀಕ್ಷೆಗಳಿಗೆ ಚೆನ್ನಾಗಿ ಓದಿ' ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕೋಟಾದಲ್ಲಿ 'ಯುವ ಶಕ್ತಿ ಸಂವಾದ'ವನ್ನು ಉದ್ದೇಶಿಸಿ ಮಾತನಾಡಿದ ನಿರ್ಮಲಾ ಸೀತಾರಾಮನ್, ಯುವ ಮನಸ್ಸುಗಳೊಂದಿಗೆ ಸಂವಹನ ನಡೆಸುತ್ತಿರುವುದು ಉಲ್ಲಾಸದಾಯಕವಾಗಿದೆ ಎಂದು ಹೇಳಿದರು. 'ಇದು ತುಂಬಾ ಉತ್ತೇಜಕವಾಗಿದೆ. ಯುವ ಮನಸ್ಸುಗಳಿಂದಾಗಿ ನಾನು ತುಂಬಾ ಪ್ರಭಾವಿತಳಾಗಿದ್ದೇನೆ. ಇವರ ಶಕ್ತಿಯೇ ಭಾರತವನ್ನು ಮುಂದೆ ಸಾಗುವಂತೆ ಮಾಡುತ್ತದೆ' ಎಂದು ಅವರು ಹೇಳಿದರು.