ಕಾಸರಗೋಡು: ಮಾದಕ ಪದಾರ್ಥ ವಿರುದ್ಧ ಯುವ ಶಕ್ತಿ ಎಂಬ ಘೋಷಣೆಯನ್ವಯ ಕಾಸರಗೋಡು ಚಿನ್ಮಯ ಯುವ ಕೇಂದ್ರದ ನೇತೃತ್ವದಲ್ಲಿ 'ಪುನರ್ಜನಿ ಮಿನಿ ಮ್ಯಾರಥಾನ್'ಶನಿವಾರ ನಡೆಯಿತು. ಸೀತಾಂಗೋಳಿ ಕಿನ್ಫ್ರಾ ಪಾರ್ಕ್ ವಠಾರದಿಂದ ಆರಂಭಗೊಂಡ ಮಿನಿ ಮ್ಯಾರಥಾನನ್ನು ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿದರು. ಎ.ಕೆ.ನಾಯರ್ ಅಧ್ಯಕ್ಷತೆ ವಹಿಸಿದ್ದರು. ಚಿನ್ಮಯ ಮಿಷನ್ ಕೇರಳ ಘಟಕ ಅಧ್ಯಕ್ಷ ಸ್ವಾಮಿ ವಿವಿಕ್ತಾನಂದಸರಸ್ವತಿ, ಕಬಡ್ಡಿ ಪಟು ಜಗದೀಶ್ ಕುಂಬಳೆ, ಎಂ.ಎಸ್.ಸುಕುಮಾರಿ, ಕೆ. ಶ್ರೀಕಾಂತ್, ರವೀಶ ತಂತ್ರಿ ಕುಂಟಾರು, ಸ್ವಾಮಿ ವಿಶ್ವಾನಂದ, ಸ್ವಾಮಿ ತತ್ವಾನಂದ, ಬ್ರಹ್ಮಚಾರಿಣಿ ರೋಜಿಶಾ ಪಾಲ್ಗೊಂಡಿದ್ದರು.
ವಿದ್ಯನಗರ ಚಿನ್ಮಯ ವಿದ್ಯಾಲಯ ವಠಾರದಲ್ಲಿ ನಡೆದ ಸಮಾರಂಭದಲ್ಲಿ ಚಿನ್ಮಯ ಯುವ ಕೇಂದ್ರದ ರಾಜ್ಯ ಸಂಯೋಜಕ ಬ್ರಹ್ಮಚಾರಿ ಸುಧೀರ್ ಚೈತನ್ಯ ಪ್ರಾಸ್ತಾವಿಕ ಮಾತನಾಡಿದರು. ಶಾಸಕ ಎನ್.ಎ ನೆಲ್ಲಿಕುನ್ನು, ಸ್ವಾಮಿ ವಿವಿಕ್ತಾನಂದ ಹಾಗೂ ಜಗದೀಶ್ ಕುಂಬಳೆ ಮ್ಯಾರಥಾನ್‍ಗೆ ಫ್ಲ್ಯಾಗ್‍ಆಫ್ ನೆರವೇರಿಸಿದರು. ಸೀತಾಂಗೋಳಿಯಿಂದ ವಿದ್ಯಾನಗರ ಚಿನ್ಮಯ ಕ್ಯಾಂಪಸ್‍ವರೆಗೆ ವಿವಿಧ ಸಂಸ್ಥೆಗಳಿಂದ ಸಾವಿರದ ಐನೂರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಓಟದ ಬಳಿಕ ಕಾಸರಗೋಡು ಯೋಧ ತಾಯ್ಕೊಂಡ ಅಕಾಡೆಮಿ ವತಿಯಿಂದ ತಾಯ್ಕೊಂಡ ಪ್ರದರ್ಶನ ನಡೆಯಿತು. ಪೆÇ್ರಫೆಸರ್ ವಿ. ಗೋಪಿನಾಥನ್ ಸ್ವಾಗತಿಸಿದರು. ಕೆ. ಬಾಲಚಂದ್ರ ವಂದಿಸಿದರು.
ಚಿನ್ಮಯ ಯುವ ಕೇಂದ್ರದ ನೇತೃತ್ವದಲ್ಲಿ ಮಾದಕ ಪದಾರ್ಥ ವಿರುದ್ಧ 'ಪುನರ್ಜನಿ ಮಿನಿ ಮ್ಯಾರಥಾನ್'
0
ಜನವರಿ 14, 2023
Tags