HEALTH TIPS

ಬಡಗುಶಬರಿಮಲೆ ಉಬ್ರಂಗಳದಲ್ಲಿ ಜಾತ್ರಾ ಮಹೋತ್ಸವ ಸಂಪನ್ನ


          ಬದಿಯಡ್ಕ: ಬಡಗುಶಬರಿಮಲೆ ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾನದ ಜಾತ್ರಾ ಮಹೋತ್ಸವ, ವಿಶೇಷ ಪಾಟು ಉತ್ಸವದ ಸಂದಭರ್À ಬುಧÀವಾರ ರಾತ್ರಿ ಶ್ರೀ ಭೂತಬಲಿ ಉತ್ಸವ, ಬೆಡಿಸೇವೆ, ದರ್ಶನಬಲಿ, ರಾಜಾಂಗಣ ಪ್ರಸಾದ ವಿತರಣೆ ನಡೆಯಿತು. ಈ ಸಂದಭರ್Àದಲ್ಲಿ ಊರ ಪರವೂರ ಅನೇಕ ಮಂದಿ ಭಕ್ತಾದಿಗಳು ಪಾಲ್ಗೊಂಡು ಶ್ರೀ ದೇವರ ಪ್ರಸಾದ ಸ್ವೀಕರಿಸಿದರು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷಕೂಟ ಕದ್ರಿ ಮತ್ತು ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಕದ್ರಿ ರಾಮಚಂದ್ರ ಭಟ್ ಎಲ್ಲೂರು ಸಂಯೋಜನೆಯಲ್ಲಿ `ಸುದರ್ಶನ ಗರ್ವಭÀಂಗ, ಭಾರ್ಗವ ವಿಜಯ' ಯಕ್ಷಗಾನ ಪ್ರದರ್ಶನಗೊಂಡಿತು. ಭಕ್ತಾದಿಗಳಿಗೆ ರಾತ್ರಿ ಭೋಜನ ಪ್ರಸಾದ ನೀಡಲಾಯಿತು. ಗುರುವಾರ ಬೆಳಗಿನ ಜಾವ ಶ್ರೀ ಧೂಮಾವತಿ ಸನ್ನಿಧಿಯಲ್ಲಿ ಧೂಮಾವತಿ ದೈವದ ಕೋಲ, ಅರಸಿನ ಹುಡಿ ಪ್ರಸಾದ ವಿತರಣೆ ನಡೆಯಿತು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries