ಕೊಚ್ಚಿ: ಜೋಶಿಮಠದ ಗಾಬರಿಗೊಳಿಸುವ ಸುದ್ದಿಯ ಪರಿಸ್ಥಿತಿಯಿಂದ ಕಣ್ಣೂರು ನಿವಾಸಿ, ಬದರಿನಾಥ ದೇಗುಲದ ರಾವಲ್ (ಪ್ರಧಾನ ಅರ್ಚಕ) ಈಶ್ವರ ಪ್ರಸಾದ್ ನಂಬೂದಿರಿ ನೆಮ್ಮದಿಗಾಗಿ ಪ್ರಾರ್ಥಿಸುತ್ತಿದ್ದಾರೆ.
ಈ ಬಿಕ್ಕಟ್ಟನ್ನು ನಿವಾರಿಸಬಹುದು. ಹಿಮಾಲಯದ ಪರಿಸ್ಥಿತಿಗೆ ಒಗ್ಗದ ಎಲ್ಲವನ್ನೂ ದೂರವಿಡಬೇಕು- ಎನ್ನುತ್ತಾರೆ ಪಯ್ಯನ್ನೂರು ಉತ್ತರ ಚಂದ್ರಮನ ಇಲ್ಲಂನ ಈಶ್ವರ ಪ್ರಸಾದ್ ನಂಬೂದಿರಿ. ಈಶ್ವರ ಪ್ರಸಾದ್ ನಂಬೂದಿರಿ ಅವರು 10 ವರ್ಷಗಳಿಂದ ಬದರಿನಾಥದ ಪ್ರಧಾನ ಅರ್ಚಕರಾಗಿದ್ದಾರೆ. ಇಲ್ಲಿ ಅನಾದಿ ಕಾಲದಿಂದಲೂ ಪ್ರಧಾನ ಅರ್ಚಕರು ಪಯ್ಯನ್ನೂರು ರಾಘವಪುರದ ನಂಬೂದಿರಿ ಮನೆತನದವರು. ಈಶ್ವರ್ ಪ್ರಸಾದ್ ಕುಟುಂಬದ ಒಂಬತ್ತು ಮಂದಿ ಈ ಹಿಂದೆ ರಾವಲ್ ಆಗಿದ್ದಾರೆ.
ಹಿಮಾಲಯ ತಪ್ಪಲು ಪ್ರದೇಶವನ್ನು ಪರಿಸರ ವಿರೋಧಿ ಚಟುವಟಿಕೆಗಳಿಗೆ ಬಳಸಿಕೊಂಡಿರುವುದೇ ಮೂಲ ಸಮಸ್ಯೆಯಾಗಿದ್ದು, ವ್ಯಾಪಕ ಭೂಕುಸಿತ ನಿರೀಕ್ಷಿತ ಎಂದಿದ್ದಾರೆ. ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಅವನತಿ ಕಟ್ಟಿಟ್ಟ ಬುತ್ತಿ ಎಮದು ಅವರು ಎಚ್ಚರಿಸಿದ್ದಾರೆ.
26ರಂದು ಋಷಿಕೇಶದಲ್ಲಿ ನಡೆಯಲಿರುವ ಸಭೆಗೆ ಈಶ್ವರ ಪ್ರಸಾದ್ ನಂಬೂದಿರಿ ಸಹ ತೆರಳುತ್ತಿದ್ದು, ಚಳಿಗಾಲದ ಬಳಿಕ ಮುಂದಿನ ವರ್ಷ ದೇವಸ್ಥಾನ ತೆರೆಯುವ ದಿನಾಂಕ ನಿರ್ಧರಿಸಲಾಗುತ್ತದೆ. ರಾವಲ್ ಜೊತೆಗೆ ತೆಹ್ರಿ ರಾಜ ಮತ್ತು ಮುಖ್ಯಮಂತ್ರಿಯ ಪ್ರತಿನಿಧಿ ದಿನಾಂಕವನ್ನು ನಿಗದಿಪಡಿಸುತ್ತಾರೆ. ಅಕ್ಷಯ ತೃತೀಯ ನಂತರ ಒಂದನೇ ದಿನ ಗರ್ಭಗೃಹ ತೆರೆಯಲಾಗುತ್ತದೆ. ಜೋಶಿಮಠದಲ್ಲಿನ ಗಂಭೀರ ಪರಿಸರ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ದಿನಾಂಕವನ್ನು ನಿಗದಿಪಡಿಸಲಾಗುತ್ತದೆ ಎಂದಿದ್ದಾರೆ.
ಜೋಶಿಮಠದ ಪ್ರಾರ್ಥನೆ ನಮ್ಮೊಂದಿಗಿರಲಿ: ಬದರಿನಾಥ ದೇವಸ್ಥಾನದ ಪ್ರಧಾನ ಅರ್ಚಕ, ಕಣ್ಣೂರಿನ ಈಶ್ವರ್ ಪ್ರಸಾದ್ ನಂಬೂದಿರಿ ಏನೆನ್ನುತ್ತಾರೆ
0
ಜನವರಿ 14, 2023