ನವದೆಹಲಿ: ಎಚ್‌ಐವಿ ಸೋಂಕಿನಿಂದ ಬಳಲುತ್ತಿರುವವರಿಗೆ ಉಚಿತ ಆಹಾರ, ಚಿಕಿತ್ಸೆ ಒದಗಿಸುವಂತೆ ದೆಹಲಿ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ಬಡತನ ರೇಖೆಗಿಂತ ಕೆಳಗೆ ಬದುಕುತ್ತಿರುವ ಸೋಂಕಿತರನ್ನು ಅವರಿಗೆ ಅನ್ವಯವಾಗುವ ಕಾನೂನನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆಯೂ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರ ನೇತೃತ್ವದ ಪೀಠವು ದೆಹಲಿ ಸರ್ಕಾರವು ಎಚ್‌ಐವಿ ಸೋಂಕಿತರಿಗಾಗಿ ಅನುಷ್ಠಾನಗೊಳಿಸಿರುವ ಯೋಜನೆಗಳ ಕುರಿತು ಪರಿಶೀಲನೆ ನಡೆಸಿತು.
ಎಚ್‌ಐವಿ/ಏಡ್ಸ್, ಇತರ ಬಹು ಅಂಗವೈಕಲ್ಯ ಮತ್ತು ಕಾಯಿಲೆಗಳಿಂದ ಬಳಲುತ್ತಿರುವ ಮತ್ತು ಅವರ ಕುಟುಂಬದಿಂದ ಪರಿತ್ಯಕ್ತರಾಗಿರುವ ಮತ್ತು ಆಶ್ರಯವಿಲ್ಲದೆ ಇರುವ ವ್ಯಕ್ತಿಗಳ ಅರ್ಜಿಗೆ ಸಂಬಂಧಿಸಿ ಹೈಕೋರ್ಟ್ ಈ ಆದೇಶ ನೀಡಿದೆ.