ಪೆರ್ಲ: ಸಾಮಾಜಿಕ ಜೀವನಕ್ಕೆ ಸವಾಲೆಸೆಯುತ್ತಿರುವ ಮಾದಕ ವ್ಯಸನವನ್ನು ಸಾಮಾಜಿಕವಾಗಿ ದೂರವಿಡಲು ಪ್ರತಿಯೋರ್ವ ಮಹಿಳೆಯು ಪ್ರತಿಜ್ಞಾ ಬದ್ಧರಾಗಬೇಕೆಂದು ಮಹಿಳಾ ಲೀಗ್ ಮಂಜೇಶ್ವರ ಮಂಡಲದ ಅಧ್ಯಕ್ಷೆ ಆಯಿಷಾ ಪೆರ್ಲ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಪೆರ್ಲ ವೆಸ್ಟ್ 10ನೇ ವಾರ್ಡ್ ಮಹಿಳಾ ಲೀಗ್ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದರು.
ಎಣ್ಮಕಜೆ ಪಂಚಾಯತ್ ಸದಸ್ಯ ರಮ್ನಾ ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ಅಶ್ರಫ್ ಮಾಸ್ತರ್ ಮಾದಕ ವ್ಯಸನದ ವಿರುದ್ಧ ತರಗತಿ ನಡೆಸಿದರು.
ಮುಸ್ಲಿಂ ಲೀಗ್ ಎಣ್ಮಕಜೆ ಪಂಚಾಯತ್ ಅಧ್ಯಕ್ಷ ಅಬೂಬಕ್ಕರ್ ಪೆರ್ದನೆ, ಪ್ರ.ಕಾರ್ಯದರ್ಶಿ ಸಿದ್ಧೀಕ್ ಒಳಮೊಗರ್, ಸಿದ್ಧೀಖ್ ಹಾಜಿ ಖಂಡಿಗೆ, ಮಹಮ್ಮದ್ ಕುಂಞ ಪರಪ್ಪಕರಿಯ, ಹಕ್ಕೀಂ ಖಂಡಿಗೆ, ಇ.ಸೂಪ್ಪಿ ಮೌಲವಿ, ಆಶ್ರಫ್ , ಶಮೀಲ್ ಪೆರ್ಲ ಮುಂತಾದವರು ಉಪಸ್ಥಿತರಿದ್ದರು.
ಮಾದಕ ವಸ್ತು ಮಾಫಿಯಾವನ್ನು ಸಮಾಜದಿಂದ ದೂರವಿರಿಸಲು ಪ್ರತಿಜ್ಞಾಬದ್ಧರಾಗಬೇಕು: ಆಯಿಷಾ ಪೆರ್ಲ
0
ಜನವರಿ 11, 2023