ಕಾಸರಗೋಡು: ಕೇರಳದಲ್ಲಿ ಪ್ರವಾಸೋದ್ಯಮಕ್ಕೆ ಸ್ಥಳೀಯಾಡಳಿತ ಸಂಸ್ಥೆಗಳು ಅತಿ ಹೆಚ್ಚು ಮಹತ್ವ ನೀಡಬೇಕು. ಪ್ರವಾಸೋದ್ಯಮವು ಪ್ರಪಂಚದಾದ್ಯಂತ ಸ್ಥಳೀಯಾಡಳಿತ ಸರ್ಕಾರಗಳಿಂದ ನಡೆಸಲ್ಪಡುತ್ತದೆ ಎಂದು ರಾಜ್ಯ ಯೋಜನಾ ಮಂಡಳಿ ಸದಸ್ಯ ಡಾ.ಜಿಜು ಪಿ.ಅಲೆಕ್ಸ್ ಹೇಳಿದರು.
ಬೇಕಲ ಅಂತರಾಷ್ಟ್ರೀಯ ಬೀಚ್ ಉತ್ಸವದ ಅಂಗವಾಗಿ ಸ್ಥಳೀಯಾಡಳಿತ ಸಂಸ್ಥೆಗಳು ಮತ್ತು ಪ್ರವಾಸೋದ್ಯಮ ವಿಷಯದ ಕುರಿತು ಆಯೋಜಿಸಿದ್ದ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರವಾಸೋದ್ಯಮ ವಿಜ್ಞಾನದ ಸಾಧ್ಯತೆಗಳ ಬಗ್ಗೆಯೂ ಜನಪ್ರತಿನಿಧಿಗಳು ಅಧ್ಯಯನ ನಡೆಸಬೇಕು. ಕೇರಳದ ಒಟ್ಟು ದೇಶೀಯ ಆದಾಯದ ಶೇಕಡಾ 18 ರಷ್ಟು ಪ್ರವಾಸೋದ್ಯಮ ಕ್ಷೇತ್ರವನ್ನು ಅವಲಂಬಿಸಿದೆ. ಸುಮಾರು 20 ಪ್ರತಿಶತದಷ್ಟು ಉದ್ಯೋಗ ವಲಯವು ಪ್ರವಾಸೋದ್ಯಮವನ್ನು ಅವಲಂಬಿಸಿದೆ. ಪ್ರವಾಸೋದ್ಯಮ ಸಾಮಥ್ರ್ಯವನ್ನು ಸುಧಾರಿಸಲು ಸಾಕಷ್ಟು ಕಾಲ್ಪನಿಕ ಚಟುವಟಿಕೆಗಳನ್ನು ರಾಜ್ಯ ಸರ್ಕಾರ ಜಾರಿಗೊಳಿಸುತ್ತಿದೆ ಎಂದು ಹೇಳಿದರು.
ಬೇಕಲ ರೆಡ್ ಮೂನ್ ಬೀಚ್ ಪಾರ್ಕ್ ನಲ್ಲಿ ನಡೆದ ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಬೇಕಲ ಅಂತರಾಷ್ಟ್ರೀಯ ಬೀಚ್ ಫೆಸ್ಟಿವಲ್ ಆಯೋಜನಾ ಸಮಿತಿ ಅಧ್ಯಕ್ಷ, ಶಾಸಕ ಸಿ.ಎಚ್.ಕುಂಞಂಬು ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಮುಖ್ಯ ಅತಿಥಿಯಾಗಿದ್ದರು. ಮನರಂಜನಾ ಪ್ರವಾಸೋದ್ಯಮ ವಲಯದಲ್ಲಿ ಪ್ರಾದೇಶಿಕ ಆರ್ಥಿಕ ಅಭಿವೃದ್ಧಿ ಅವಕಾಶಗಳು ಎಂಬ ವಿಷಯದ ಕುರಿತು ಕಿಲಾ ಮಹಾನಿರ್ದೇಶಕ ಡಾ.ಜಾಯ್ ಇಲಮನ್ ಮಾತನಾಡಿದರು. ಪ್ರವಾಸೋದ್ಯಮ ಕ್ಷೇತ್ರ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಅವಕಾಶಗಳು ಮತ್ತು ಮಧ್ಯಸ್ಥಿಕೆ ಸಾಧ್ಯತೆಗಳ ವಿಷಯದ ಕುರಿತು ಡಾ.ಟಿ.ಆರ್.ಜುಮಾ ಮಾತನಾಡಿದರು. ಗ್ರಾಮ ಪಂಚಾಯಿತಿ ಸಂಘದ ಸಿಇಒ ಕೆ.ಬಿ.ಮದನ್ ಮೋಹನ್ ಚರ್ಚೆಗೆ ಚಾಲನೆ ನೀಡಿದರು. ಬ್ಲಾಕ್ ಪಂಚಾಯಿತಿ ಸಂಘದ ಜಿಲ್ಲಾಧ್ಯಕ್ಷ ಕೆ.ಮಣಿಕಂಠನ್, ಗ್ರಾಮ ಪಂಚಾಯಿತಿ ಸಂಘದ ಜಿಲ್ಲಾಧ್ಯಕ್ಷ ಕೆ.ಪಿ.ವತ್ಸಲನ್, ಬಿಆರ್ ಡಿಸಿ ಎಂ.ಡಿ. ಶಿಜಿನ್ ಪರಂಬತ್ ಮಾತನಾಡಿದರು. ಅಜಯನ್ ಪನಯಾಲ್ ಸ್ವಾಗತಿಸಿ, ಸುಕುಮಾರನ್ ಪೂಚಕಾಡ್ ವಂದಿಸಿದರು. ವಿವಿಧ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು ಮೊದಲಾದವರು ಭಾಗವಹಿಸಿದ್ದರು.
ಸ್ಥಳೀಯ ಸಂಸ್ಥೆಗಳು ಪ್ರವಾಸೋದ್ಯಮದ ಬಳಕೆದಾರರಾಗಬೇಕು: ಡಾ.ಜಿಜು.ಪಿ.ಅಲೆಕ್ಸ್
0
ಜನವರಿ 01, 2023