ಪಟ್ನಾ: ಕೇಂದ್ರ ರಾಜ್ಯ ಸಚಿವ ಅಶ್ವಿನಿ ಚೌಬೆ ಅವರ ಬೆಂಗಾವಲು ವಾಹನ ಅಪಘಾತಕ್ಕೀಡಾಗಿದ್ದು ಹಲವಾರು ಪೊಲೀಸರು ಗಾಯಗೊಂಡಿದ್ದಾರೆ.
ಇಲ್ಲಿನ ಮಥಿಲ-ನಾರಾಯಣಪುರ ರಸ್ತೆಯ ಸೇತುವೆ ಸಮೀಪ ಬೆಂಗಾವಲು ವಾಹನ ಭಾನುವಾರ ರಾತ್ರಿ ಕಾಲುವೆಗೆ ಉರುಳಿದೆ.ಘಟನೆಯಲ್ಲಿ ಚಾಲಕ ಹಾಗೂ ಮೂವರು ಪೊಲೀಸರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಅದೇ ಬೆಂಗಾವಲು ವಾಹನದ ಹಿಂದೆ ಸಚಿವ ಅಶ್ವಿನಿ ಚೌಬೆ ಅವರ ವಾಹನ ಬರುತ್ತಿತ್ತು. ಸ್ವಲ್ಪದರಲ್ಲೇ ಭಾರೀ ಅವಘಡವೊಂದು ತಪ್ಪಿದಂತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪಲ್ಟಿಯಾದ ಬೆಂಗಾವಲು ವಾಹನವನ್ನು ಪರಿಶೀಲಿಸುತ್ತಿರುವ ವಿಡಿಯೊವನ್ನು ಸಚಿವರು ಹಂಚಿಕೊಂಡಿದ್ದಾರೆ. ಬಕ್ಸರ್‌ನಿಂದ ಪಟ್ನಾಗೆ ತೆರಳುತ್ತಿರುವಾಗ ನಮ್ಮ ಬೆಂಗಾವಲು ವಾಹನ ಪಲ್ಟಿಯಾಗಿದೆ. ದೇವರ ಕೃಪೆಯಿಂದಾಗಿ ಎಲ್ಲರೂ ಕ್ಷೇಮವಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಗಾಯಗೊಂಡ ಪೊಲೀಸರನ್ನು ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.