ಪೆರ್ಲ: ಮಂಜೇಶ್ವರ ತಾಲೂಕಿನ ಎಣ್ಮಕಜೆ ಗ್ರಾಮದ ಕಾಟುಕುಕ್ಕೆ ಎಂಬಲ್ಲಿ ಹಂದಿಗಳಿಗೆ ಬರುವ ವೈರಾಣು ಕಾಯಿಲೆ ಆಫ್ರಿಕನ್ ಹಂದಿಜ್ವರ (ಹಂದಿ ಜ್ವರ) ದೃಢಪಟ್ಟಿದೆ ಎಂದು ಜಿಲ್ಲಾ ಪ್ರಾಣಿ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ. ಕಾಟುಕುಕ್ಕೆಯ ಹಂದಿ ಫಾರಂನಲ್ಲಿ ಈ ರೋಗ ಕಂಡುಬಂದಿದೆ. ರೋಗ ಹರಡದಂತೆ ತುರ್ತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳ ಉಸ್ತುವಾರಿ ಎಡಿಎಂ ಎ.ಕೆ.ರಾಮೇಂದ್ರನ್ ಮಾಹಿತಿ ನೀಡಿದ್ದಾರೆ.
ಆಫ್ರಿಕನ್ ಹಂದಿ ಜ್ವರವು ಸಾಕುವ ಮತ್ತು ಕಾಡು ಹಂದಿಗಳಲ್ಲಿ ಕಂಡುಬರುವ ಅತ್ಯಂತ ಸಾಂಕ್ರಾಮಿಕ ವೈರಲ್ ರೋಗವಾಗಿದೆ. ಈ ರೋಗವು ನೇರ ಸಂಪರ್ಕದ ಮೂಲಕ ಹರಡುವ ಸಾಧ್ಯತೆಯಿದೆ. ಇದೇ ವೇಳೆ, ಇದು ಮನುಷ್ಯರಿಗೆ ಮತ್ತು ಇತರ ಸಾಕುಪ್ರಾಣಿಗಳಿಗೆ ಹರಡುವುದಿಲ್ಲ. ರಾಷ್ಟ್ರೀಯ ಕ್ರಿಯಾ ಯೋಜನೆಯ ಪ್ರಕಾರ, ಪ್ರಾರಂಭ ಕೇಂದ್ರದಿಂದ ಒಂದು ಕಿಲೋಮೀಟರ್ ವ್ಯಾಪ್ತಿಯೊಳಗೆ ಹಂದಿಗಳನ್ನು ನಿರ್ಮೂಲನೆ ಮಾಡಬೇಕು. ಅಲ್ಲದೆ ಹಂದಿಗಳ ಹತ್ಯೆ, ಮಾಂಸದ ಮಾರಾಟ ಅಥವಾ ಹಂದಿಗಳ ಸಾಗಣೆ ಮಾಡಬಾರದು. ಕೊಂದ (ಹತ್ಯೆ ಮಾಡಿದ) ಹಂದಿಗಳನ್ನು ವೈಜ್ಞಾನಿಕವಾಗಿ ಸಂಸ್ಕಾರ ಮಾಡಬೇಕು. 2020 ಜನವರಿಯಲ್ಲಿ ಭಾರತದ, ಈಶಾನ್ಯ ರಾಜ್ಯಗಳಾದ ಅಸ್ಸಾಂ ಮತ್ತು ಅರುಣಾಚಲದಲ್ಲಿ ಈ ರೋಗ ವರದಿಯಾಗಿತ್ತು.
ಕಾಟುಕುಕ್ಕೆಯಿಂದ 10 ಕಿ.ಮೀ ವ್ಯಾಪ್ತಿಯಲ್ಲಿ ಮೂರು ತಿಂಗಳ ಕಾಲ ಹಂದಿಮಾಂಸವನ್ನು ನಿμÉೀಧ:
ಕಾಟುಕುಕ್ಕೆಯಲ್ಲಿ ರೋಗದ ಕೇಂದ್ರ ಬಿಂದುವಾಗಿರುವ ಪ್ರದೇಶದಿಂದ ಹತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಮೂರು ತಿಂಗಳ ಕಾಲ ಹಂದಿ ಹತ್ಯೆ ಹಾಗು ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ. ಆಫ್ರಿಕನ್ ಹಂದಿ ಜ್ವರ ದೃಢಪಟ್ಟಿರುವ ಫಾರ್ಮ್‍ನ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಹಂದಿಗಳನ್ನು ಕೊಲ್ಲಲು ಮತ್ತು ವೈಜ್ಞಾನಿಕವಾಗಿ ಶವವನ್ನು ಸಂಸ್ಕಾರ ಮಾಡಲು ಜಿಲ್ಲಾ ಪ್ರಾಣಿ ಕಲ್ಯಾಣ ಕಛೇರಿಯಿಂದ ಕ್ಷಿಪ್ರ ಪ್ರತಿಕ್ರಿಯೆ ತಂಡವನ್ನು ರೂಪೀಕರಿಸಲಾಗುವುದು. ಪೋಲೀಸ್, ಕಂದಾಯ ಸ್ಥಳೀಯಾಡಳಿತ, ಮೋಟಾರು ವಾಹನ ಇಲಾಖೆ, ಅಗ್ನಿಶಾಮಕ ಮತ್ತು ರಕ್ಷಣಾ, ಕಂದಾಯ ಇಲಾಖೆ ಇತ್ಯಾದಿ ಸಂಸ್ಥೆಗಳು ಅಗತ್ಯವಾದ ಸಹಕಾರ ನೀಡುತ್ತವೆ. ಕಾಸರಗೋಡು ಆರ್‍ಡಿಒ ಚಟುವಟಿಕೆಗಳನ್ನು ಸಮನ್ವಯಗೊಳಿಸಲಿದ್ದಾರೆ.
ಪೆÇಲೀಸ್ ಮತ್ತು ಮೋಟಾರು ವಾಹನ ಇಲಾಖೆಯು ವಾಹನ ತಪಾಸಣೆ ಮತ್ತು ಚೆಕ್ ಪೋಸ್ಟ್ ಮೂಲಕ ರೋಗದ ಕೇಂದ್ರ ಬಿಂದುವಾಗಿರುವ ಕಾಟುಕುಕ್ಕೆಯಿಂದ 10 ಕಿಮೀ ವ್ಯಾಪ್ತಿ ಪ್ರದೇಶಕ್ಕೆ ಯಾವುದೇ ಹಂದಿಗಳು, ಹಂದಿ ಮಾಂಸ, ಹಂದಿಮಾಂಸ ಉತ್ಪನ್ನಗಳು ಮತ್ತು ಹಂದಿ ಸಗಣಿ ಸಾಗಿಸಲಾಗುತ್ತಿಲ್ಲ ಎಂದು ಖಚಿತಪಡಿಸಲಾಗುತ್ತದೆ. ಸೋಂಕು ಡೃಡೀಕರಣ ಕೇಂದ್ರದಿಂದ ಹಂದಿಗಳನ್ನು ವಿಲೇವಾರಿಗೊಳಿಸುವ ಪ್ರಕ್ರಿಯೆ ಪೂರ್ಣಗೊಂಡ ನಂತರ ಅಗ್ನಿಶಾಮಕ ಇಲಾಖೆಯು ಪ್ರದೇಶವನ್ನು ಸೋಂಕುರಹಿತಗೊಳಿಸುತ್ತದೆ. ರೋಗ ಪ್ರತಿರೋಧ ಕಾರ್ಯಗಳನ್ನು ನಡೆಸಲು ಆಗಮಿಸುವ ಕ್ಷಿಪ್ರ ಸ್ಪಂದನಾ ತಂಡದ ಸದಸ್ಯರಿಗೆ ವಸತಿ ಹಾಗೂ ಇತರ ಮೂಲ ಸೌಕರ್ಯಗಳನ್ನು ಎಣ್ಮಕಜೆ ಗ್ರಾಮ ಪಂಚಾಯತ್ ಖಚಿತಪಡಿಸಿದೆ.
ಜಿಲ್ಲೆಯಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ: ಕಾಟುಕುಕ್ಕೆಯಲ್ಲಿ ಕಂಡುಬಂದ ಮೊದಲ ಪ್ರಕರಣ
0
ಜನವರಿ 12, 2023