ಕಾಸರಗೋಡು: ಕಾಸರಗೋಡು ಜಿಲ್ಲಾ ಬಿಲ್ಲವ ಸೇವಾ ಸಂಘದ ಮಹಾಸಭೆ ಫೆಬ್ರವರಿ 19 ರಂದು ಭಾನುವಾರ ಮಧ್ಯಾಹ್ನ 2 ಗಂಟೆಗೆ ಬ್ಯಾಂಕ್ ರಸ್ತೆಯ ಆಲ್ ಕೇರಳ ರೇಶನ್ ಡೀಲರ್ಸ್ ಅಸೋಸಿಯೇಶನ್‍ನ ಸಭಾಂಗಣದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ನಾರಾಯಣ ಗುರು ಯುವ ವೇದಿಕೆಯ ಜಿಲ್ಲಾ ಸಮಿತಿ ಅಧ್ಯಕ್ಷ ಶಿವಕೃಪ ಕುಂಜತ್ತೂರು ಮತ್ತು ಬಿಲ್ಲವ ಸಮಾಜದ ಹಿರಿಯ ಮುಂದಾಳು ನಿವೃತ್ತ ಮುಖ್ಯೋಪಾಧ್ಯಾಯ ಅಶೋಕ್ ಮಾಸ್ಟರ್ ಬಾಡೂರು ಹಾಗು ಇತರ ಗಣ್ಯರು ಭಾಗವಹಿಸಿ ಮಾರ್ಗದರ್ಶನ ನೀಡಲಿರುವರು. ಕಾಸರಗೋಡು ಜಿಲ್ಲಾ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಕೆ.ಕಮಲಾಕ್ಷ ಸುವರ್ಣ ಅಧ್ಯಕ್ಷತೆ ವಹಿಸಲಿರುವರು.
ಪದಾಧಿಕಾರಿಗಳ ಸಭೆಯಲ್ಲಿ ಬಿಲ್ಲವ ಮುಂದಾಳುಗಳಾದ ಕೆ.ಕಮಲಾಕ್ಷ ಸುವರ್ಣ, ಚಂದ್ರಶೇಖರ ಚಿಪ್ಲುಕೋಟೆ, ಉಮೇಶ ಭಗವತಿ ನಗರ, ತಾರಾನಾಥ ಗಂಗೆ, ನಾರಾಯಣ ಕೊರಕ್ಕೋಡು, ಭಾಸ್ಕರ ಕೆ, ಸರೋಜಿನಿ, ರವಿ ಪೂಜಾರಿ ಕೋಟೆಕ್ಕಾರು ಮೊದಲಾದವರು ಭಾಗವಹಿಸಿ ಮಾರ್ಗದರ್ಶನ ನೀಡಿದರು.
ಕಾಸರಗೋಡು ಜಿಲ್ಲಾ ಬಿಲ್ಲವ ಸೇವಾ ಸಂಘದ ಮಹಾಸಭೆ
0
ಜನವರಿ 18, 2023