ಬದಿಯಡ್ಕ: ಬದಿಯಡ್ಕ ರೋಟರಿ ವತಿಯಿಂದ ಬುಧÀವಾರ ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಯನ್ನು ಬದಿಯಡ್ಕದಲ್ಲಿರುವ ಕಾರ್ಮೆಲ್ ವಿಶೇಷ ಚೇತನ ಮಕ್ಕಳೊಂದಿಗೆ ಆಚರಿಸಲಾಯಿತು.
ಮಕ್ಕಳೊಂದಿಗೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ¸ಭಾ ಕಾರ್ಯಕ್ರಮದಲ್ಲಿ ಬದಿಯಡ್ಕ ರೋಟರಿಯ ಅಧ್ಯಕ್ಷ ರಾಧಾಕೃಷ್ಣ ಪೈ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಪೊಲೀಸ್ ಠಾಣಾಕಾರಿ ವಿನೋದ್ ಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ರೋಟರಿಯ ಕಾರ್ಯದರ್ಶಿ ರಾಘವೇಂದ್ರ ನಾಯಕ್ ಬದಿಯಡ್ಕ, ಕಾರ್ಮೆಲ್ ಶಾಲೆಯ ಪ್ರಾಂಶುಪಾಲರು ಮಾತನಾಡಿದರು. ಪೊಲೀಸ್ ಸಿಬ್ಬಂದಿಯೋರ್ವರು ಹಾಡನ್ನು ಹಾಡಿ ಗಮನಸೆಳೆದರು. ವಿಶೇಷ ಚೇತನ ಮಕ್ಕಳ ಪ್ರತಿಭಾ ಪ್ರದರ್ಶನ ನಡೆಯಿತು. ಮಕ್ಕಳಿಗೆ ಉಡುಗೊರೆ ಹಾಗೂ ಸಿಹಿ ಊಟ ನೀಡಲಾಯಿತು. ರೋಟರಿ ಸದಸ್ಯರು ಪಾಲ್ಗೊಂಡಿದ್ದರು.
ರೋಟರಿ ಸದಸ್ಯರಿಂದ ವಿಶೇಷ ಚೇತನ ಮಕ್ಕಳೊಂದಿಗೆ ಹೊಸವರ್ಷಾಚರಣೆ
0
ಜನವರಿ 05, 2023
Tags