ಕಾಸರಗೋಡು: ಕರೊನಾ ಕಾಲಾವಧಿಯಲ್ಲಿ ಹಲವು ಶಿಕ್ಷಕರ ವೈವಿಧ್ಯಪೂರ್ಣ ತರಗತಿ ಆಲಿಸಿರುವ ವಿದ್ಯಾರ್ಥಿಗಳು ಇಂದು ತಮಗೆ ಬೋಧನೆ ನಡೆಸುವ ಶಿಕ್ಷಕರನ್ನು ತುಲನೆಮಾಡುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಕರು ತಮ್ಮನ್ನು ಮತ್ತಷ್ಟು ಪುನಶ್ಚೇತನಗೊಳಿಸಿ ತರಗತಿಯನ್ನು ಆಕರ್ಷಕಗೊಳಿಸಲು ಯತ್ನಿಸಬೇಕು ಎಂದು ಜಿಲ್ಲಾ ಶಿಕ್ಷಣ ಉಪ ನಿರ್ದೇಶಕ ಸಿ.ಕೆ ವಾಸು ತಿಳಿಸಿದ್ದಾರೆ.
ಅವರು ಕೇರಳ ಸರ್ಕಾರದ ಶಿಕ್ಷಣ ಇಲಾಖೆಯ ಸ್ಮಾರ್ಟ್ ಯೋಜನೆಯನ್ವಯ ಕನ್ನಡ ಭಾಷಾ ಅಧ್ಯಾಫಕರಿಗೆ ಮಾಯಿಪ್ಪಾಡಿ'ಡಯೆಟ್'ನೇತೃತ್ವದಲ್ಲಿ ಕಾಸರಗೋಡು ಬೋಸ್ಕೋ ಹೋಟೆಲ್ ಸಭಾಂಗಣದಲ್ಲಿ ನಡೆದ ರಾಜ್ಯಮಟ್ಟದ ತರಬೇತಿ ಉದ್ಘಾಟಿಸಿ ಮಾತನಾಡಿದರು.ಡಯೆಟ್ ಪ್ರಾಂಶುಪಾಲ ಡಾ. ರಘುರಾಂ ಭಟ್ ಅಧ್ಯಕ್ಷತೆ ವಹಿಸಿದ್ದರು.ಡಯೆಟ್ ಪ್ರಾಧ್ಯಾಪಕ ಮಧುಸೂದನನ್, ಸಂಪನ್ಮೂಲ ಅಧ್ಯಾಪಕರಾದ ರಾಮಣ್ಣ ಮಾಸ್ಟರ್, ವಿಶಾಲಾಕ್ಷ ಪುತ್ರಕಳ ಉಪಸ್ಥಿತರಿದ್ದರು.
ಶ್ರೀಲತಾ ಕೆ. ಕೂಡ್ಲು ಪ್ರಾರ್ಥನೆ ಹಾಡಿದರು.ಡಯೆಟ್ ಪ್ರಾಧ್ಯಾಪಕ ಅಶೋಕ್ ಸ್ವಾಗತಿಸಿದರು.ದಿವ್ಯಗಂಗಾ ಪಿ. ಪೆರಡಾಲ ವಂದಿಸಿದರು. ಸಂಪನ್ಮೂಲ ಅಧ್ಯಾಪಕರಾದ ಡಿ.ರಾಮಣ್ಣ ದೇಲಂಪಾಡಿ, ವಿಶಾಲಾಕ್ಷ ಪುತ್ರಕಳ, ಭಾಗ್ಯಲಕ್ಷ್ಮೀ ಬೇಕೂರು, ರೋಹಿತಾಕ್ಷಿ ಕೆ.ಬಿ, ದಿವ್ಯಗಂಗಾ ಪಿ. ತರಗತಿ ನಡೆಸಿದರು.
ಶಿಕ್ಷಕರು ತರಗತಿಯನ್ನು ಆಕರ್ಷಕಗೊಳಿಸಲು ಯತ್ನಿಸಬೇಕು: ಡಿಡಿಇ ಸಿ.ಕೆ ವಾಸು ಅಭಿಪ್ರಾಯ
0
ಜನವರಿ 19, 2023
Tags