ತಿರುವನಂತಪುರ : ಜಾತಿ ವಿವೇಚನೆಯನ್ನು ತೋರಿಸುತ್ತಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿರುವ ಹಿನ್ನೆಲೆಯಲ್ಲಿ ಕೆಆರ್ ನಾರಾಯಣನ್ ಸಂಸ್ಥೆಯ ನಿರ್ದೇಶಕ ಶಂಕರ್ ಮೋಹನ್ ರಾಜೀನಾಮೆ ನೀಡಿರುವರು.
ಮುಖ್ಯಮಂತ್ರಿ ಕಚೇರಿಯಲ್ಲಿ ನಿನ್ನೆ ಅವರು ರಾಜೀನಾಮೆ ನೀಡಿರುವರು. ಈ ವೇಳೆ ಮುಖ್ಯಮಂತ್ರಿ ಕಚೇರಿಯಲ್ಲಿ ಇರಲಿಲ್ಲ. ಉನ್ನತ ಶಿಕ್ಷಣ ಸಚಿವರಿಗೆ ರಾಜೀನಾಮೆಯ ಪ್ರತಿಯನ್ನು ರವಾನಿಸಲಾಗಿದೆ.
ಜೊತೆಗೆ ರಾಜೀನಾಮೆ ಪತ್ರದ ಪ್ರತಿಯನ್ನು ಅಧ್ಯಕ್ಷರೂ ಆದ ಅಡೂರು ಗೋಪಾಲಕೃಷ್ಣನ್ ಗೆ ನೀಡಿದ್ದಾರೆ ಎಂದು ಶಂಕರ್ ಮೋಹನ್ ತಿಳಿಸಿದ್ದಾರೆ. ವಿವಾದಗಳೊಂದಿಗೆ ರಾಜೀನಾಮೆಗೆ ಯಾವುದೇ ಸಂಬಂಧವಿಲ್ಲ. ತನ್ನ ಅವಧಿ ಮುಗಿದಿದೆ. ಯಾರೂ ತನ್ನೊಂದಿಗೆ ರಾಜೀನಾಮೆಗೆ ಆಗ್ರಹಿಸಿಲ್ಲ ಎಂದು ಶಂಕರ್ ಮೋಹನ್ ಹೇಳಿರುವರು.
ಕಳೆದ ಕೆಲವು ದಿನಗಳಲ್ಲಿ ಜಾತಿವಿವೇಚನೆ ತೋರಿಸುತ್ತಿದ್ದಾರೆ ಎಂದು ಆರೋಪಿಸಿದ ವಿದ್ಯಾರ್ಥಿಗಳು ನಿರ್ದೇಶಕ ಶಂಕರ್ ಮೋಹನರ ವಿರುದ್ಧ ಅಡೂರ್ ಗೋಪಾಲಕೃಷ್ಣನ್ ಗೆ ದೂರು ನೀಡಿ ಹೋರಾಟ ನಡೆಸಿದ್ದರು. ಆಶಿಕ್ ಅಬು, ಮಹೇಶ್ ನಾರಾಯಣನ್, ರಾಜೀವ್ ರವಿ ಮೊದಲಾದ ಎಡಪಂಥೀಯ ವಿಭಾಗದ ಯುವ ವಿದ್ಯಾರ್ಥಿ ಸಂಘಟನೆ ಹೋರಾಟವನ್ನು ಬೆಂಬಲಿಸಿದ್ದರು. ಆದರೆ ಮೊನ್ನೆ ಎಂ.ಎ. ಬೇಬಿ ಮತ್ತು ನಂತರ ಮುಖ್ಯಮಂತ್ರಿ ಅವರು ಅಡೂರಿಗೆ ಬೆಂಬಲ ನೀಡಿ ಹೋರಾಟ ಶಂಕರ್ ಮೋಹನನ ವಿರುದ್ಧ ಮಾತ್ರ ಎಂದಿದ್ದರು.
ಈ ಮಧ್ಯೆ ವಿದ್ಯಾರ್ಥಿಗಳ ಆರೋಪದ ಕುರಿತು ತನಿಖೆ ನಡೆಸಿದ ಕಮೀಷನ್ ಶಂಕರ್ ಮೋಹನ್ ವಿರುದ್ಧ ವರದಿ ನೀಡಲಾಗಿದೆ. ಎಂ.ಎ.ಬೇಬಿ ಯವರ ಬೆಂಬಲದ ಬಳಿಕ ಅಡೂರ್ ವಿರುದ್ಧ ಹೋರಾಟ ತಣ್ಣಗಾಯಿತು.
ಕೆಆರ್ ನಾರಾಯಣನ್ ಇನ್‍ಸ್ಟಿಟ್ಯೂಟ್ ನಿರ್ದೇಶಕ ಶಂಕರ್ ಮೋಹನ್ ರಾಜೀನಾಮೆ
0
ಜನವರಿ 21, 2023
Tags