ಕಾಸರಗೋಡು: ಕೇರಳ-ಕರ್ನಾಟಕ ಗಡಿ ಪ್ರದೇಶ ಎಣ್ಮಕಜೆ ಪಂಚಾಯಿತಿಯ ಸ್ವರ್ಗ ಆಸುಪಾಸು ಸ್ಯಾಟಲೈಟ್ ಫೋನ್ ಬಳಕೆಯಾಗುತ್ತಿರುವ ಬಗ್ಗೆ ರಹಸ್ಯ ಮಾಹಿತಿಯನ್ವಯ ಕೇರಳ ಸ್ಪೆಶ್ಯಲ್ ಬ್ರಾಂಚ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ನೇರ ಉಪಗ್ರಹ ಮೂಲಕ ಸಂಪರ್ಕ ಬಳಸಿಕೊಂಡು ಈ ಸ್ಯಾಟಲೈಟ್ ಫೋನ್ ಕಾರ್ಯಾಚರಿಸುತ್ತಿದ್ದು, ಭಾರತದಲ್ಲಿ ಸರ್ಕಾರದ ನಿರ್ದಿಷ್ಟ ಸಂಸ್ಥೆಗಳಿಗೆ ಹೊರತುಪಡಿಸಿ, ಖಾಸಗಿಯಾಗಿ ಇವುಗಳ ಬಳಕೆ ನಿಷಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಸ್ಯಾಟಲೈಟ್ ಫೋನ್ ಬಳಕೆ ಮೇಲೆ ಕಟ್ಟುನಿಟ್ಟಿನ ನಿಯಂತ್ರಣವಿದೆ. ಯಾವುದೇ ಕಡಿದಾದ ಪ್ರದೇಶಗಳಲ್ಲೂ ಸಂವಹನ ನಡೆಸಲು ಸ್ಯಾಟಲೈಟ್ ಫೋನ್‍ಗಳಿಂದ ಸಾಧ್ಯವಾಗುತ್ತಿದ್ದು, ಈ ನಿಟ್ಟಿನಲ್ಲಿ ಆಗಂತುಕರು ಯಾರಾದರೂ, ಇದನ್ನು ಬಳಸುತ್ತಿರಬಹುದು ಎಂಬುದಾಗಿ ಸಂಶಯಿಸಲಾಗಿದೆ. ಗುಪ್ತಚರ ಏಜನ್ಸಿಗಳು ಸ್ಯಾಟಲೈಟ್ ಫೋನ್ ಕರೆಗಳ ಲೊಕೇಶನ್ ಟ್ರೇಸ್ ಮಾಡಿದ್ದು, ಕೇರಳ-ಕರ್ನಾಟಕ ಗಡಿ ಪ್ರದೇಶ ಪಾಣಾಜೆಯಿಂದ ಒಂದು ಕಿ.ಮೀ ಆಸುಪಾಸು ಫೋನ್ ಕರೆ ಹೋಗಿರುವುದನ್ನು ಪತ್ತೆಹಚ್ಚಿದ್ದು, ಈ ಬಗ್ಗೆ ಕೇರಳ ಸ್ಪೆಶ್ಯಲ್ ಬ್ಯಾಂಚ್‍ಗೆ ಲಭಿಸಿದ ಮಾಹಿತಿಯನ್ವಯ ತನಿಖೆ ಆರಂಭಿಸಲಾಗಿದೆ.
ಸ್ವರ್ಗದಲ್ಲಿ ತಪಾಸಣೆ:
ಸ್ಯಾಟಲೈಟ್ ಫೋನ್ ಬಳಕೆಯಾಗುತ್ತಿರುವ ಬಗ್ಗೆ ಲಭಿಸಿದ ಮಾಹಿತಯನ್ವಯ ಸ್ಪೆಶ್ಯಲ್ ಬ್ರಾಂಚ್ ಅಧಿಕಾರಿಗಳು ಪಾಣಾಜೆ, ಎಣ್ಮಕಜೆ ಪಂಚಾಯಿತಿಯ ಸ್ವರ್ಗ ಆಸುಪಾಸು ವಿವಿಧೆಡೆ ತನಿಖೆ ನಡೆಸುತ್ತಿದ್ದಾರೆ. ಇಲ್ಲಿನ ವ್ಯಕ್ತಿಯೊಬ್ಬರನ್ನು ಕೇಂದ್ರೀಕರಿಸಿ ತನಿಖೆ ಮುಂದುವರಿದಿದೆ. ಸ್ವರ್ಗ, ವಾಣಿನಗರ, ಪಾಣಾಜೆ ಪ್ರದೇಶದಲ್ಲಿ ಮೊಬೈಲ್ ಬಳಕೆಗೆ ನೆಟ್‍ವರ್ಕ ಸಮಸ್ಯೆ ಎದುರಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸ್ಯಾಟಲೈಟ್ ಫೋನ್ ಬಳಸುತ್ತಿರಬೇಕೆಂದೂ ಸಂಶಯಿಸಲಾಗಿದೆ. ಸ್ಯಾಟಲೈಟ್ ಫೋನ್ ಬಳಕೆ ಕಾನೂನು ಬಾಹಿರ ಆಗಿರುವುದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ದೇಶದ ರಕ್ಷಣೆಗೆ ಸಂಬಂಧಿಸಿದ ವಿಷಯ ಇದಾಗಿದ್ದು, ಸ್ಯಾಟಲೈಟ್ ಫೋನ್ ಬಳಕೆದಾರರ ಪತ್ತೆಗೆ ಈಗಾಗಲೇ ಸ್ಪೆಶ್ಯಲ್ ಬ್ರಾಂಚ್ ಪೊಲೀಸರು ಕಾರ್ಯೋನ್ಮುಖರಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವೈಭವ್ ಸಕ್ಸೇನಾ ತಿಳಿಸಿದ್ದಾರೆ.
ಕೇರಳ-ಕರ್ನಾಟಕ ಗಡಿ ಪ್ರದೇಶದಲ್ಲಿ ಸ್ಯಾಟಲೈಟ್ ಫೋನ್ ಬಳಕೆ ಪತ್ತೆ: ವ್ಯಕ್ತಿಯೊಬ್ಬರನ್ನು ಕೇಂದ್ರೀಕರಿಸಿ ಸ್ಪೆಶ್ಯಲ್ ಬ್ರಾಂಚ್‍ನಿಂದ ತನಿಖೆ
0
ಜನವರಿ 06, 2023
Tags