ಮುಂಬೈ: ಖಾಸಗಿ ವಾಹನಗಳನ್ನು ಕಾರ್ ಪೂಲಿಂಗ್‌ಗೆ ಬಳಸುವಂತಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ.
ಮಹಾರಾಷ್ಟ್ರದ ಪ್ರಮುಖ ನಗರಗಳಲ್ಲಿ ಅಪ್ಲಿಕೇಶನ್ ಆಧಾರಿತ ಬೈಕ್, ಆಟೊ ಮತ್ತು ಕಾರ್ ಟ್ಯಾಕ್ಸಿ ಸೇವೆಗಳನ್ನು ಒದಗಿಸುತ್ತವೆ.ಪ್ರಸ್ತುತ ಕೆಲವು ಅಗ್ರಿಗೇಟರ್‌ಗಳು ಖಾಸಗಿ ವಾಹನಗಳನ್ನು ಕಾರ್ ಪೂಲಿಂಗ್‌ಗೆ ಅನುಮತಿ ನೀಡುತ್ತಿದ್ದವು. ಇದೀಗ ಸರ್ಕಾರ ಕಾರ್ ಪೊಲಿಂಗ್ ನಿಷೇದಿಸಿದೆ.
ಬಿಳಿಯ ನಂಬರ್ ಪ್ಲೆಟ್ ಹೊಂದಿರುವ ವಾಹನಗಳನ್ನು (ಖಾಸಗಿ) ವಾಣಿಜ್ಯ ಚಟುವಟಿಕೆಗಳಿಗೆ ಬಳಸುವಂತಿಲ್ಲ ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.
ಖಾಸಗಿ ವಾಹನಗಳನ್ನು ರೈಡ್ ಪೂಲಿಂಗ್ ಸೇರಿದಂತೆ ವಾಣಿಜ್ಯ ಬಳಕೆಗೆ ಸಮ್ಮತಿಸಿದರೆ ಅದಕ್ಕೆ ನಿಯಮಗಳು, ಷರತ್ತುಗಳು ಹಾಗೂ ಮಾರ್ಗಸೂಚಿಗಳ ವಿವರವಾದ ಪರಿಗಣನೆ ಅಗತ್ಯವಿದೆ ಎಂದು ವಿವಿಧ ಸಂಘಟನೆಗಳು ತಿಳಿಸಿವೆ.
ಈ ಕುರಿತು ಅಧ್ಯಯನ ನಡೆಸಲು ಮತ್ತು ಶಿಫಾರಸುಗಳನ್ನು ಮಾಡಲು ಸರ್ಕಾರ ಸಮಿತಿ ರಚಿಸಿದೆ.