ನವದೆಹಲಿ: ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿ, ವರ್ಗಾವಣೆ ಮತ್ತು ಬಡ್ತಿಗೆ ಸಂಬಂಧಿಸಿದಂತೆ ಮಾರ್ಗದರ್ಶನ ಮಾಡುವ ಕಾರ್ಯವಿಧಾನದ (ಎಂಒಪಿ) ಕುರಿತು ಒಮ್ಮತಕ್ಕೆ ಬರಲು ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಏಳು ವರ್ಷಗಳ ಬಳಿಕವೂ ವಿಫಲವಾಗಿರುವುದಕ್ಕೆ ಸಂಸದೀಯ ಸಮಿತಿಯು ಅಚ್ಚರಿ ವ್ಯಕ್ತಪಡಿಸಿದೆ.
ಬಿಜೆಪಿಯ ಹಿರಿಯ ನಾಯಕ ಸುಶೀಲ್ ಕುಮಾರ್ ಮೋದಿ ನೇತೃತ್ವದ ಸಮಿತಿಯು ಇತ್ತೀಚಿಗೆ ನೀಡಿದ್ದ ತನ್ನ ವರದಿಯಲ್ಲಿ ನ್ಯಾಯಾಂಗ ಮತ್ತು ಸರ್ಕಾರವು ಎಂಒಪಿ ಅನ್ನು ಅಂತಿಮಗೊಳಿಸುವ ನಿರೀಕ್ಷೆಯನ್ನು ವ್ಯಕ್ತಪಡಿಸಿತ್ತು.
ನ್ಯಾಯಮೂರ್ತಿಗಳ ಅರ್ಹತಾ ಮಾನದಂಡ, ಪಾರದರ್ಶಕತೆ, ಸಚಿವಾಲಯದ ಸ್ಥಾಪನೆ ಮತ್ತು ದೂರುಗಳನ್ನು ಎದುರಿಸುವ ಕಾರ್ಯವಿಧಾನವನ್ನು ಪರಿಗಣಿಸಿ ಸುಪ್ರೀಂಕೋರ್ಟ್‌ನ ಕೊಲಿಜಿಯಂನೊಂದಿಗೆ ಎಂಒಪಿಯನ್ನು ಅಂತಿಮಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ 2015ರ ಡಿಸೆಂಬರ್‌ನಲ್ಲಿ ನಿರ್ದೇಶನ ನೀಡಿತ್ತು.