ಕಾಸರಗೋಡು: ಸುಳ್ಯಮೆ ಪೊಯ್ಯೆತ್ತಬೈಲ್ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಿರುವ ಶ್ರೀ ಮಹಾಗಣಪತಿ ದೇವರು, ಶ್ರೀ ಮಹಾವಿಷ್ಣುಮೂರ್ತಿ ದೇವರು, ನಾಗದೇವರ ನೂತನ ಬಿಂಬದ ಶೋಭಾಯಾತ್ರೆಯು ಮುಡಿಪು ಶ್ರೀ ಮುಡಿಪಿನ್ನಾರ್ ದೈವಸ್ಥಾನದಿಂದ ಜ. 15ರಂದು ಮಧ್ಯಾಹ್ನ 1ಗಂಟೆಗೆ ಹೊರಡಲಿರುವುದು. ಮುಡಿಪಿನ್ನಾರ್ ದೈವಸ್ಥಾನದಿಂದ ಹೊರಟು ಮುದುಂಗಾರುಕಟ್ಟೆ, ಬಾಕ್ರಬೈಲ್, ಪಲ್ಲೆದಪಡ್ಪು, ದೈಗೋಳಿ, ಸುಂಕದಕಟ್ಟೆ, ಪಾವಳ, ಕೂಟತ್ತಜೆ, ಹೂಹಾಕುವ ಕಲ್ಲು, ನಾರ್ಯ ಗುತ್ತು , ದಾರಿಯಾಗಿ ಶೋಭಾಯಾತ್ರೆಯು ಕ್ಷೇತ್ರಕ್ಕೆ ತಲುಪಲಿರುವುದು.
ಶೋಭಾ ಯಾತ್ರೆಯಲ್ಲಿ ದೇವರ ನೂತನ ಬಿಂಬಗಳಿಗೆ ಯಾವುದೇ ರೀತಿಯ ಸೇವೆ, ಪೂಜೆ,ಆರತಿ ಇರುವುದಿಲ್ಲ. ಹೂವಿನ ಮಾಲೆ, ತುಳಸಿ ಮಾಲೆ ಮಾತ್ರ ಸಮರ್ಪಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ: ನಾಳೆ ನೂತನ ಬಿಂಬಗಳ ಶೋಭಾಯಾತ್ರೆ
0
ಜನವರಿ 13, 2023
Tags