ಕೋಝಿಕ್ಕೋಡ್: ವಿವಾಹ ಮನೆಯಲ್ಲಿ ಸಿಡಿಮದ್ದು ಸಿಡಿಸುವ ಬಗ್ಗೆ ಉಂಟಾದ ಅಭಿಪ್ರಾಯ ವೈತ್ಯಾಸ ಬಳಿಕ ತೀವ್ರ ಸ್ವರೂಪದ ಗೊಂದಲ-ಗದ್ದಲಗಳಿಗೆ ಕಾರಣವಾದ ಘಟನೆ ನಡೆದಿದೆ. ಕೋಝಿಕ್ಕೋಡ್‍ನ ಮೆಪಯ್ಯೂರ್‍ನಲ್ಲಿ ಈ ಘಟನೆ ನಡೆದಿದೆ.
ವರನ ಮನೆಯವರು ಹಾಗೂ ವಧುವಿನ ಮನೆಯವರ ನಡುವೆ ಜಗಳ ನಡೆದಿದೆ. ವಡಕರದಿಂದ ಮೆಪಯ್ಯೂರಿನ ವಧುವಿನ ಮನೆಗೆ ವರ ಮತ್ತು ಅವರ ತಂಡ ಬಂದಾಗ ಗೊಂದಲ ಸೃಷ್ಟಿಯಾಯಿತು.
ವರನ ಜೊತೆಗಿದ್ದವರು ವಧುವಿನ ಮನೆಯಲ್ಲಿ ಸಿಡಿಮದ್ದು ಸಿಡಿಸಿದ್ದಾರೆ. ಇದು ವಧುವಿನ ಮನೆಯವರಿಗೆ ಇಷ್ಟವಾಗದೆ ಸಿಡಿಮದ್ದು ಸಿಡಿಸಿದವರನ್ನು ಪ್ರಶ್ನಿಸಿದ್ದಾರೆ. ಆಗ ವಾಗ್ವಾದ ನಡೆಯಿತು. ಈ ವೇಳೆ ಮಾತಿನ ಚಕಮಕಿ ಕೈ ಕೈ ಮಿಲಾಯಿಸುವಲ್ಲಿ ಅಂತ್ಯವಾಯಿತು.
ಪರಸ್ಪರ ಕೈಮಿಸಲಾಯಿಸುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದೇ ವೇಳೆ ಸ್ಥಳೀಯರೇ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಿದ್ದರಿಂದ ಪೆÇಲೀಸರು ಪ್ರಕರಣ ದಾಖಲಿಸಿಕೊಳ್ಳಲಿಲ್ಲ.
ಸಿಡಿಮದ್ದು ವಿಷಯದಲ್ಲಿ ಹೊೈಕೈ: ವಿವಾಹ ಮನೆಯಲ್ಲಿ ಪೆಟ್ಟೇಪೆಟ್ಟು
0
ಜನವರಿ 31, 2023