ಕಾಸರಗೋಡು: ಆಹಾರ ಸುರಕ್ಷತಾ ವಿಭಾಗದ ಜಿಲ್ಲಾ ಅಧಿಕಾರಿ ಐ. ಜೆ. ಸುಬಿಮೋಲ್ ಅವರ ನೇತೃತ್ವದಲ್ಲಿ ಮಂಜೇಶ್ವರ, ಕಾಸರಗೋಡು ಮತ್ತು ಕಾಞಂಗಾಡಿನ ಹೊಟೇಲ್‍ಗಳಲ್ಲಿ ತಪಾಸಣೆ ನಡೆಸಲಾಯಿತು. ಅಧಿಕಾರಿಗಳು ತಳಂಗರೆ ಮತ್ತು ಮೊಗ್ರಾಲ್‍ನಲ್ಲಿ ಶುಚಿತ್ವ ಪಾಲಿಸದ ಹೋಟೆಲ್‍ಗಳನ್ನು ಮುಚ್ಚಿಸಿದರು. ಒಟ್ಟು 31 ಹೋಟೆಲ್‍ಗಳಲ್ಲಿ ತಪಾಸಣೆ ನಡೆಸಿದ್ದು, 7 ಹೋಟೆಲ್‍ಗಳಿಗೆ ದಂಡ ವಿಧಿಸಿದ್ದಾರೆ. ಆಹಾರ ಸುರಕ್ಷತಾ ಅಧಿಕಾರಿಗಳಾದ ಫಾಬಿನಾ ಮೊಹಮ್ಮದ್ ಅಶ್ರಫಿ, ಡಾ. ಆದಿತ್ಯನ್, ಅನೂಪ್ ಜೋಸೆಫ್, ದಾನೇಶ್, ವಿ. ಕೆ. ಸಿನೋಜಿ ಮುಂತಾದವರು ದಾಳಿ ನೇತೃತ್ವ ವಹಿಸಿದ್ದರು.
ಆಹಾರಸುರಕ್ಷಾ ವಿಭಾಗ ಅಧಿಕಾರಿಗಳಿಂದ ಹೋಟೆಲ್‍ಗಳಲ್ಲಿ ಬಿಗು ತಪಾಸಣೆ
0
ಜನವರಿ 05, 2023