ನಮ್ಮ ಕಾಲು ನಮ್ಮ ಆರೋಗ್ಯದ ಬಗ್ಗೆ ಹೇಳುತ್ತದೆ. ಕೆಲವೊಮ್ಮೆ ಕಾಲಿನಲ್ಲಿ ಕೆಲವೊಂದು ಬದಲಾವಣೆ ಗೋಚರಿಸಿದರೆ ಸಾಕಷ್ಟು ಜನ ನಿರ್ಲಕ್ಷ್ಯ ಮಾಡುತ್ತಾರೆ, ಆದರೆ ಕಾಲಿನಲ್ಲಿ ಗೋಚರಿಸುವ ಬದಲಾವಣೆ ನಮ್ಮ ದೇಹದಲ್ಲಿ ಏನೋ ದೊಡ್ಡ ಸಮಸ್ಯೆ ಇದೆ ಎಂಬುವುದರ ಲಕ್ಷಣವೂ ಆಗಿರುತ್ತದೆ ಆದ್ದರಿಂದ ನಿರ್ಲಕ್ಷ್ಯ ಮಾಡಲೇಬಾರದು.
ಅದರಲ್ಲೂ ನಿಮ್ಮ ಕಾಲಿನಲ್ಲಿ ಈ ಬಗೆಯ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡಲೇಬೇಡಿ:
1.ಕಾಲಿನಲ್ಲಿ ಸೆಳೆತ:
ಮಸಲ್ ಕ್ಯಾಚ್ ಅಥವಾ ಕಾಲುಗಳಲ್ಲಿ ಸೆಳೆತ ಹಲವರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ಪೋಷಕಾಂಶದ ಕೊರತೆ ಉಂಟಾದಾಗ, ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ಈ ರೀತಿಯಾಗುವುದು. ನೀವು ಕ್ಯಾಲ್ಸಿಯಂ, ಮೆಗ್ನಿಷ್ಯಿಯಂ, ಪೊಟಾಷ್ಯಿಯಂ ಅಧಿಕವಿರುವ ಆಹಾರ ಸೇವಿಸಿದರೆ ಸರಿಯಾಗುವುದು. ಅಲ್ಲದೆ ದಿನದಲ್ಲಿ ಸಾಕಷ್ಟು ನೀರು ಕುಡಿಯಿರಿ. ಇಷ್ಟೆಲ್ಲಾ ಮಾಡಿಯೂ ಸ್ನಾಯು ಸೆಳೆತ ಕಂಡು ಬರುತ್ತಿದ್ದರೆ ವೈದ್ಯರಿಗೆ ತೋರಿಸಿ.
2. ಕಾಲುಗಳು ಕೆಂಪಾಗುವುದು,
ಊತ ಹಾಗೂ ಪಾದಗಳಲ್ಲಿ ನೋವು ಯೂರಿಕ್ ಆಮ್ಲದ ಸಮಸ್ಯೆಯಿದ್ದಾಗ ಈ ರೀತಿ ಉಂಟಾಗುತ್ತದೆ. ಯೂರಿಕ್ ಆಮ್ಲದ ಕಲ್ಲುಗಳು ಪಾದಗಳಲ್ಲಿ ಸಂಗ್ರಹವಾಗಿ ಊತ, ಕೆಂಪಾಗುವುದು, ಪಾದಗಳಲ್ಲಿ ನೋವು ಈ ಬಗೆಯ ಸಮಸ್ಯೆ ಕಂಡು ಬರುವುದು. ಇನ್ನು ಸಂಧಿವಾತದ ಸಮಸ್ಯೆಯಿದ್ದರೂ ಈ ರೀತಿ ಉಂಟಾಗುವುದು.
3. ಪಾದದ ಗಾಯ ಬೇಗನೆ ಒಣಗದೇ ಇದ್ದರೆ ನಿಮ್ಮ ಕಾಲುಗಳಿಗೆ ಚಿಕ್ಕ ಗಾಯವಾಗಿ ಅದು ಬೇಗನೇ ಒಣಗದೇ ಇದ್ದರೆ ಮಧುಮೇಹದ ಬಗ್ಗೆ ತಿಳಿಯಲು ರಕ್ತ ಪರೀಕ್ಷೆ ಮಾಡಿಸಿ. ಏಕೆಂದರೆ ಮಧುಮೇಹಿಗಳಿಗೆ ಚಿಕ್ಕ ಗಾಯವಾದರೂ ಬೇಗನೆ ಒಣಗುವುದಿಲ್ಲ. ನೀವು ಇತ್ತೀಚೆಗೆ ಮಧುಮೇಹ ಪರೀಕ್ಷೆ ಮಾಡಿಸದೆ ಇದ್ದರೆ ರಕ್ತ ಪರೀಕ್ಷೆ ಮಾಡಿಸಿ.
4. ಹೆಬ್ಬರಳಿನ ಕೂದಲು ಉದುರುತ್ತಿದ್ದರೆ ನಿಮ್ಮ ಪಾದದ ಹೆಬ್ಬರಳಿನಲ್ಲಿ ಕೂದಲು ಉದುರುತ್ತಿದ್ದರೆ ನಿಮ್ಮಲ್ಲಿ ರಕ್ತ ಸಂಚಾರ ಸರಿಯಾಗಿ ಆಗುತ್ತಿಲ್ಲವೆಂದರ್ಥ. ಅತ್ಯಧಿಕ ಕೊಲೆಸ್ಟ್ರಾಲ್ ಇದ್ದಾಗ ನರಗಳಿಗೆ ತೊಂದರೆಯಾಗುವುದು, ಇದರಿಂದ ರಕ್ತನಾಳಗಳಲ್ಲಿ ಸರಿಯಾಗಿ ರಕ್ತಸಂಚಾರವಾಗುವುದಿಲ್ಲ. ಕೂದಲು ಉದುರುವುದು, ಹೆಬ್ಬರಳಿನಲ್ಲಿ ಪಲ್ಸ್ ತೋರಿಸದೇ ಇರುವುದು ಈ ರೀತಿಯಾದರೆ ವೈದ್ಯರಿಗೆ ತೋರಿಸಿ.