ಅಮರಾವತಿ: ಸಂಕ್ರಾಂತಿ ಪ್ರಯುಕ್ತ ಆಂಧ್ರಪ್ರದೇಶದಲ್ಲಿ ಆಯೋಜಿಸಿದ್ದ ಕೋಳಿ ಕಾಳಗ ಸ್ಫರ್ಧೆಯ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಗೋದಾವರಿ ಜಿಲ್ಲೆಯ ಎಲ್ಲೂರು ಮತ್ತು ಕಾಕಿನಾಡ ಜಿಲ್ಲೆಗಳಲ್ಲಿ ಭಾನುವಾರ ಈ ದುರ್ಘಟನೆ ನಡೆದಿದೆ.
ಸಂಕ್ರಾಂತಿಯ ಸಂದರ್ಭದಲ್ಲಿ ಕೋಳಿ ಕಾಳಗ ಆಯೋಜನೆ ಮಾಡಲಾಗಿತ್ತು. ಈ ವೇಳೆ ಕೋಳಿ ಕಾಲಿಗೆ ಕಟ್ಟಿದ್ದ ಚಾಕುವಿನಿಂದ ಪದ್ಮರಾಜು (20) ಎಂಬುವವರಿಗೆ ಗಂಭೀರ ಗಾಯಗಳಾಗಿದ್ದವು. ಆಸ್ಪತ್ರೆ ತಲುಪುವ ಮುನ್ನವೇ ಅವರು ಮೃತಪಟ್ಟಿದ್ದಾರೆ.
ಎರಡನೇ ಘಟನೆಯಲ್ಲಿ ಕಾಕಿನಾಡ ಜಿಲ್ಲೆಯ ಸುರೇಶ್ (43) ಎಂಬುವವರು ಮೃತ ದುರ್ದೈವಿ. ಕೋಳಿಗೆ ಚಾಕು ಕಟ್ಟಲು ಯತ್ನಿಸಿದಾಗ ಮಣಿಕಟ್ಟಿಗೆ ಗಾಯವಾಗಿದೆ. ತೀವ್ರ ರಕ್ತಸ್ರಾವದಿಂದ ಅವರೂ ಮೃತಪಟ್ಟರು.
ಹೀಗಾಗಿ ಹಬ್ಬದ ದಿನದಂದು ಎರಡು ಕುಟುಂಬಗಳನ್ನು ಕತ್ತಲೆಯಲ್ಲಿ ಮುಳುಗಿದವು. 2018ರಲ್ಲಿ ಸುಪ್ರೀಂ ಕೋರ್ಟ್ ಕೋಳಿ ಕಾಳಗವನ್ನು ನಿಷೇಧಿಸಿತ್ತು. ಆದರೂ ಆಂಧ್ರಪ್ರದೇಶದ ಹಲವಾರು ಭಾಗಗಳಲ್ಲಿ, ವಿಶೇಷವಾಗಿ ಕರಾವಳಿ ಪ್ರದೇಶದಲ್ಲಿ ಕೋಳಿ ಕಾಳಗ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ.
ಸಾಮಾನ್ಯವಾಗಿ ಎರಡು ಕೋಳಿಗಳಲ್ಲಿ ಒಂದು ಕೋಳಿ ಸಾವಿನೊಂದಿಗೆ ಕೋಳಿ ಕಾಳಗ ಕೊನೆಗೊಳ್ಳುತ್ತದೆ.