ತಿರುವನಂತಪುರಂ: ಕೇರಳ ತೀವ್ರ ಸಾಲದ ಬಿಕ್ಕಟ್ಟಿನಲ್ಲಿದೆ ಎಂದು ಯುಡಿಎಫ್ ಶ್ವೇತಪತ್ರ ಹೊರಡಿಸಿದೆ. ಸಾಲದ ಸುಳಿಯಲ್ಲಿರುವ ಕೇರಳ ಸರ್ಕಾರದ ಹೆಸರಿನಲ್ಲಿ ಯುಡಿಎಫ್ ಬಿಡುಗಡೆ ಮಾಡಿರುವ ಶ್ವೇತಪತ್ರದಲ್ಲಿ ಕೇರಳ ಸರ್ಕಾರದ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿದೆ.
ತೆರಿಗೆ ಸಂಗ್ರಹ ಪರಿಣಾಮಕಾರಿಯಾಗಿಲ್ಲ, ದುಂದುವೆಚ್ಚ ಮತ್ತು ಭ್ರμÁ್ಟಚಾರದಿಂದ ಕೇರಳ ಹಾಳಾಗಿದೆ ಎಂದು ಶ್ವೇತಪತ್ರದಲ್ಲಿ ಹೇಳಲಾಗಿದೆ. ಯುಡಿಎಫ್ ಕೇಂದ್ರದ ನೀತಿಗಳನ್ನೂ ದೂಷಿಸಿದೆ. ಸಾಲ-ಜಿಡಿಪಿ ಅನುಪಾತವು ಶೇಕಡಾ 30 ಕ್ಕಿಂತ ಕಡಿಮೆ ಇರುವುದನ್ನು ಬೊಟ್ಟುಮಾಡಿದೆ.
ಆದರೆ 2027ರ ವೇಳೆಗೆ ಇದು ಶೇ.38.2 ಆಗಲಿದೆ ಎಂದು ಆರ್‍ಬಿಐ ಭವಿಷ್ಯ ನುಡಿದಿದೆ. ಆದರೆ ಆ ಎಲ್ಲಾ ಮುನ್ಸೂಚನೆಗಳ ಹೊರತಾಗಿಯೂ, ಯುಡಿಎಫ್ ಶ್ವೇತಪತ್ರವು ಈಗಾಗಲೇ ಅನುಪಾತವು 39.1 ಶೇ. ತಲುಪಿದೆ ಮತ್ತು ದೊಡ್ಡ ರಾಜ್ಯಗಳಿಗಿಂತ ಹೆಚ್ಚು ಅಪಾಯಕಾರಿ ಎಂದು ಹೇಳುತ್ತದೆ.
1ನೇ ಶ್ವೇತಪತ್ರಿಕೆಯಲ್ಲಿ 2019 ರಲ್ಲಿ ಭವಿಷ್ಯ ನುಡಿದಂತೆ, ಕಿಫ್ಬಿ ಈಗ ನಿರ್ವಂಶವಾಗುವ ಹಂತದಲ್ಲಿದೆ. ಕಳೆದ ವರ್ಷದವರೆಗೆ, ಕಿಫ್‍ಬಿ ಕೇವಲ 3419 ಕೋಟಿ ರೂ. ಮಾತ್ರವಿತ್ತು. 50,000 ಕೋಟಿ ರೂ.ಗಳ ಘೋಷಿತ ಯೋಜನೆಗಳನ್ನು ಹೇಗೆ ಅನುμÁ್ಠನಗೊಳಿಸಲಾಗುತ್ತಿದೆ ಎಂದು ಯುಡಿಎಫ್ ಕೇಳಿದೆ.
ಸಾಲದ ಸುಳಿಯಲ್ಲಿ ಕೇರಳ ಸರ್ಕಾರ: ದುಂದುಗಾರಿಕೆ ಮತ್ತು ಭ್ರಷ್ಟಾಚಾರದಿಂದ ಕೇರಳ ಗಂಭೀರ ಸಾಲದ ಬಲೆಯಲ್ಲಿ: ಶ್ವೇತಪತ್ರ ಹೊರಡಿಸಿದ ಯುಡಿಎಫ್
0
ಜನವರಿ 28, 2023