ಕಾಸರಗೋಡು: ಲಯನ್ಸ್ ಕ್ಲಬ್ ಕಾಸರಗೋಡು ಇದರ ಸೇವಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಕಾಸರಗೋಡು ಲಯನ್ಸ್ ಸೇವಾ ಮಂದಿರದಲ್ಲಿ ಜರುಗಿತು. ಜಿಲ್ಲಾ ಗವರ್ನರ್ ಡಾ.ಪಿ.ಸುಧೀರ್ ಸಮಾರಂಭ ಉದ್ಘಾಟಿಸಿದರು. ಕ್ಲಬ್ ಅಧ್ಯಕ್ಷ ಎನ್.ಟಿ.ಗಂಗಾಧರನ್ ಅಧ್ಯಕ್ಷತೆ ವಹಿಸಿದ್ದರು.
ಲಯನ್ಸ್ ಮಾಜಿ ಗವರ್ನರ್ ಡಾ.ಸುಚಿತ್ರಾ ಸುಧೀರ್, ಜಿಲ್ಲಾ ಕಾರ್ಯದರ್ಶಿ ಟೈಟಸ್ ಥಾಮಸ್, ಹೆಚ್ಚುವರಿ ಕ್ಯಾಬಿನೆಟ್ ಸೆಕ್ರೆಟರಿ ವಿ.ವೇಣುಗೋಪಾಲ್, ಡಾ.ಸತ್ಯನಾಥ್, ಪ್ರಾದೇಶಿಕ ಸಮಿತಿ ಅಧ್ಯಕ್ಷ ಕೆ.ಸುಕುಮಾರನ್ ನಾಯರ್, ವಲಯಾಧ್ಯಕ್ಷ ಸುಧೀರ್ ಕುಮಾರ್, ಕ್ಲಬ್ ಕಾರ್ಯದರ್ಶಿ ರಾಜೇಂದ್ರ ಕುಂಟಾರ್, ಕೋಶಾಧಿಕಾರಿ ರಾಜೇಶ್ ಕೆ. ಉಪಸ್ಥಿತರಿದ್ದರು. ಈ ಸಂದರ್ಭ ಗಾಲಿಕುರ್ಚಿ ವಿತರಣೆ, ಡಯಾಲಿಸಿಸ್ ರೋಗಿಗಳಿಗೆ ಧನಸಹಾಯ ಮತ್ತು ಮಾದಕ ವಸ್ತುಗಳ ಸೇವನೆ ವಿರುದ್ಧ ಜಾಗೃತಿ ಕಾರ್ಯಕ್ರಮಗಳನ್ನು ಜಿಲ್ಲಾ ಗವರ್ನರ್ ಡಾ.ಪಿ.ಸುಧೀರ್ ಉದ್ಘಾಟಿಸಿದರು.
ಕಾಸರಗೋಡು ಲಯನ್ಸ್ ಕ್ಲಬ್‍ನಿಂದ ಲಯನ್ಸ್ ಸೇವಾ ಚಟುವಟಿಕೆಗಳಿಗೆ ಚಾಲನೆ
0
ಜನವರಿ 16, 2023
Tags