ನವದೆಹಲಿ: 'ಒಬ್ಬ ವ್ಯಕ್ತಿಗೆ ಒಂದು ಕಾರು' ನಿಯಮ ಜಾರಿ ಹಾಗೂ ವ್ಯಕ್ತಿ ಹೊಂದಿರುವ ಎರಡನೇ ಕಾರಿಗೆ ಪರಿಸರ ತೆರಿಗೆ ಹಾಕಬೇಕು ಎಂದು ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಅವರಿದ್ದ ನ್ಯಾಯಪೀಠ, ಅರ್ಜಿದಾರರು ಉಲ್ಲೇಖಿಸಿರುವ ಅಂಶಗಳು ಸರ್ಕಾರದ ನೀತಿಗೆ ಸಂಬಂಧಿಸಿದ್ದಾಗಿದೆ ಎಂದು ಅಭಿಪ್ರಾಯಪಟ್ಟಿತು.