ಕಾಸರಗೋಡು: ವಿದ್ಯಾನಗರ ಚಿನ್ಮಯ ಕ್ಯಾಂಪಸ್ ವತಿಯಿಂದ ಮಾದಕ ದ್ರವ್ಯ ದುವ್ರ್ಯಸನದ ವಿರುದ್ಧ ಮಿನಿ ಮ್ಯಾರಥಾನ್ ಜ. 14ರಣದು ಬೆಳಗ್ಗೆ 7ಕ್ಕೆ ಸೀತಾಂಗೋಳಿ ಸನಿಹದ ಕಿನ್‍ಫ್ರಾ ಪಾರ್ಕ್ ಬಳಿಯಿಂದ ಕಾಸರಗೋಡು ವಿದ್ಯಾನಗರದ ಚಿನ್ಮಯ ಕ್ಯಾಂಪಸ್ ವರೆಗೆ ಜರುಗಲಿರುವುದಾಗಿ ಚಿನ್ಮಯ ಮಿಷನ್ ಅಧ್ಯಕ್ಷ ಎ.ಕೆ ನಾಯರ್ ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದಾರೆ.
ಮಾದಕ ವಸ್ತುವಿನ ಅತಿಯಾದ ಬಳಕೆ ವ್ಯಾಪಕ ದಉಷ್ಪರಿಣಾಮ ಬೀರುತ್ತಿದ್ದು, ಕೇರಳದಲ್ಲಿ ಯುವಜನತೆಯನ್ನು, ಹರೆಯದ ವಿದ್ಯಾರ್ಥಿಗಳನ್ನು, ಸ್ತ್ರೀಯರನ್ನು ಹಣದ ಆಮಿಷಕ್ಕಾಗಿ ಮಾದಕ ವಸ್ತು ದಂದೆಕೋರರು ಆಮಿಷವೊಡ್ಡಿ ಮಾದಕ ದ್ರವ್ಯ ವ್ಯಸನಿಗಳನ್ನಾಗಿ ಮಾರ್ಪಡಿಸುತ್ತಿದ್ದಾರೆ. ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿಪ್ರಮುಖ ಪಾತ್ರ ವಹಿಸಬೇಕಾದ ಯುವಜನತೆ ಅತಿಯಾದ ಮಾದಕ ದ್ರವ್ಯ ಬಳಕೆ ಪರಿಣಾಮ ಮುಖ್ಯವಾಹಿನಿಯಿಂದ ದೂರ ಸರಿಯುವ ಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಚಿನ್ಮಯ ಮಿಷನ್ನಿನ ಯುವಜನ ವಿಭಾಗವಾದ ಚಿನ್ಮಯ ಯುವ ಕೇಂದ್ರವು 'ಪುನರ್ಜನಿ'ಎಂಬಹೆಸರಿನಲ್ಲಿ ಒಂದು ವರ್ಷಗಳಷ್ಟು ಕಾಲ ನಡೆಯಲಿರುವ ಮಾದಕ ವಸ್ತುವಿನ ವಿರುದ್ಧ ಪ್ರಜ್ಞೆಮೂಡಿಸುವ ಮಹಾಯಜ್ಞಕ್ಕೆ ನೇತೃತ್ವ ನೀಡುತ್ತಿದೆ. ªಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಯುವಕರು, ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳನ್ನು ಶಿಕ್ಷಣ ಸಂಸ್ಥೆಗಳನ್ನೂ ಜತೆಗೂಡಿಸಿಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
14ರಂದು ಬೆಳಗ್ಗೆ 7ಕ್ಕೆ ಶಾಸಕ ಎನ್.ಎ ನೆಲ್ಲಿಕುನ್ನು ಮ್ಯಾರಥಾನ್‍ಗೆ ಚಾಲನೆ ನೀಡುವರು. ಸೀತಾಂಗೋಳಿ ಕಿನ್ ಫ್ರಾಪಾರ್ಕ್ ಪರಿಸರದಿಂದ ಆರಂಭಿಸಿ ಮಾಯಿಪ್ಪಾಡಿ , ಉಳಿಯತ್ತಡ್ಕ, ಚೆಟ್ಟುಂಗುಳಿ,ಉದಯಗಿರಿ ,ಮುನಿಸಿಪಲ್ ಸ್ಟೇಡಿಯಂ ಮೂಲಕ ವಿದ್ಯಾನಗರ ಚಿನ್ಮಯ ಕ್ಯಾಂಪಸ್ಸಿನಲ್ಲಿ ಸಮಾಪನಗೊಳ್ಳಲಿದೆ. ಸಮಾರಂಭದಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸುವರು. ಚಿನ್ಮಯ ಮಿಷನ್ ಅಧ್ಯಕ್ಷ ಎ.ಕೆನಾಯಕ್ ಅಧ್ಯಕ್ಷತೆ ವಹಿಸುವರು. ಚಿನ್ಮಯ ಮಿಷನ್ ಕೇರಳ ಘಟಕದ ಮುಖ್ಯಸ್ಥ ಸಾಮಿ ವಿವಿಕ್ತಾನಂದಸರಸ್ವತಿ, ದೇಶೀಯ ಕಬಡ್ಡಿ ಪಟು ತರಬೇತುದಾರ ಜಗದೀಶ್ ಕುಂಬಳೆ ಪಾಲ್ಗೊಳ್ಳುವರು. ಕೇಂದ್ರೀಯ ವಿಶ್ವವಿದ್ಯಾಲಯದ ಉಪ ಕುಲಪತಿ ಪೆÇ್ರ .ವೆಂಕಟೇಶ್ವರಲು ಮುಖ್ಯ ಅತಿಥಿಯಾಗಿರುವರು. ಸುದ್ದಿಗೋಷ್ಠಿಯಲ್ಲಿ ಕೆ. ಬಾಲಚಂದ್ರನ್, ಪಿ. ಪ್ರಿಯಾಂಕ , ವಿ . ರಾಘವನ್ ಉಪಸ್ಥಿತರಿದ್ದರು.
ಹೆಚ್ಚುತ್ತಿರುವ ಮಾದಕ ದ್ರವ್ಯದ ಬಳಕೆ-ಜನಜಾಗೃತಿಗಾಗಿ ಚಿನ್ಮಯದಿಂದ ಮ್ಯಾರಥಾನ್
0
ಜನವರಿ 10, 2023
Tags