ನವದೆಹಲಿ: ಭಾರತದ ಸಶಸ್ತ್ರ ಪಡೆಗಳು ಹೆಚ್ಚು ವೃತ್ತಿಪರತೆ ಹೊಂದಿವೆ ಮತ್ತು ಅದಮ್ಯ ಧೈರ್ಯ ಮತ್ತು ತ್ಯಾಗದ ಫಲವಾಗಿ ವಿಶ್ವದಲ್ಲೇ ಅತ್ಯುತ್ತಮವೆನಿಸಿವೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಶನಿವಾರ ಬಣ್ಣಿಸಿದ್ದಾರೆ.
ಇಲ್ಲಿ ಹಮ್ಮಿಕೊಂಡಿದ್ದ ಸಶಸ್ತ್ರ ಪಡೆಗಳ ಹಿರಿಯರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೂರು ಪಡೆಗಳ ಹಿರಿಯರ ಕೊಡುಗೆಗಳನ್ನು ಸ್ಮರಿಸಿದರು.