ನವದೆಹಲಿ: ಕೇಂದ್ರ ಸರ್ಕಾರ ಗ್ಯಾಸ್ ಮಾರ್ಕೆಟಿಂಗ್ ನಿಯಮಗಳಲ್ಲಿ ಬದಲಾವಣೆ ಮಾಡಿದ ನಂತರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಅದರ ಪಾಲುದಾರ ಬಿಪಿ ಪಿಎಲ್‌ಸಿ ಹರಾಜು ಪ್ರಕ್ರಿಯೆಯನ್ನು ನಿಲ್ಲಿಸಿದೆ.
ಪ್ರತಿ ದಿನ 6 ಮಿಲಿಯನ್ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್ ಗ್ಯಾಸ್ ಮಾರಾಟಕ್ಕೆ ಇ-ಬಿಡ್ಡಿಂಗ್ ಜನವರಿ 18 ರಂದು ನಡೆಯಬೇಕಿತ್ತು.
ಆದರೆ ಕೆಜಿ-ಡಿ 6 ಬ್ಲಾಕ್‌ನಿಂದ ನೈಸರ್ಗಿಕ ಅನಿಲ ಮಾರಾಟಕ್ಕಾಗಿ ಯೋಜಿತ ಹರಾಜನ್ನು ಸ್ಥಗಿತಗೊಳಿಸಿದೆ. ಪ್ರಸ್ತುತ ಬಿಡ್ಡಿಂಗ್ ಪ್ರಕ್ರಿಯೆಯನ್ನು ಮುಂದಿನ ಸೂಚನೆ ಬರುವವರೆಗೆ ಅಮಾನತುಗೊಳಿಸಲಾಗಿದೆ ಎಂದು ಎರಡು ಸಂಸ್ಥೆಗಳು ತಿಳಿಸಿವೆ.
ಆದರೆ ಅಮಾನತಿಗೆ ಕಾರಣವನ್ನು ನೀಡಿಲ್ಲ. ನೈಸರ್ಗಿಕ ಅನಿಲದ ಮಾರಾಟದ ಮೇಲೆ ವಿಧಿಸಬಹುದಾದ ಮಾರ್ಜಿನ್ ಅನ್ನು ಮಿತಿಗೊಳಿಸುವ ಹೊಸ ನಿಯಮಗಳನ್ನು ಸರ್ಕಾರವು ಹೊರತಂದಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ.
ಇತ್ತೀಚೆಗೆ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದ ಬಿಗ್ ಬಜಾರ್ ನನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಖರೀದಿಸಿತ್ತು.