ಕುಂಬಳೆ: ಕುಂಬಳೆ ಸಂತ ಮೊನಿಕಾ ದೇವಾಲಯದ ಪಾಲಾನಾ ಸಮಿತಿಯ ಸ್ವರ್ಣ ಮಹೊತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ವಂ. ಫಾ. ಅನಿಲ್ ಪ್ರಕಾಶ್ ಡಿಸಿಲ್ವಾ ಇವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ವಂ. ಫಾ.ನಿಲೇಶ್, ವಂ.ಫಾ.ಸ್ಟಾನಿ ಸ್ಲಾಸ್ ರೊಡ್ರಿಗಸ್, ಸ್ಧಳೀಯ ಕೊನ್ವೆಂಟ್ ಮುಖ್ಯಸ್ಥೆ ಸಿ. ಮಾರ್ಗರೇಟ, ಸಿ. ಮಾರಿ ತೆರೇಸಾ ಇವರ ಗೌರವ ಉಪಸ್ಥಿತಿಯಲ್ಲಿ ಪಾಲನ ಸಮಿತಿಯ ಉಪಾಧ್ಯಕ್ಷ ಡೊಲ್ಪಿ ಡಿ’ಸೊಜಾ, ಕಾರ್ಯದರ್ಶಿ ಲಿಡಿಯ ಡಿ’ಸೊಜಾ ಹಾಗೂ ಪಾಲನಾ ಸಮಿತಿಯ ಸಂಚಾಲಕರು, ವಾರ್ಡ್ ಗುರಿಕಾರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಾಲನಾ ಸಮಿತಿಯಲ್ಲಿ 50 ವರ್ಷಗಳಿಂದ ಸೇವೆ ಸಲ್ಲಿಸಿದ 72 ಮಂದಿಯನ್ನು ಹಾಗೂ ನಿಯೋಜಿತ ಉಪಾದ್ಯಕ್ಷ ಹಾಗೂ ಕಾರ್ಯದರ್ಶಿಯವರನ್ನು ಸನ್ಮಾನಿಸಲಾಯಿತು. ಲಿಡಿಯ ಡಿ’ಸೋಜ ಸ್ವಾಗತಿಸಿ, ಪ್ರೀತಿ ಪ್ರಣಿತಾ ವಂದಿಸಿದರು. ಸಿ. ಸುನಿತಾ ನಿರೂಪಿಸಿದರು.
ಸಂತ ಮೊನಿಕಾ ದೇವಾಲಯದ ಪಾಲನಾ ಸಮಿತಿಯ ಸ್ವರ್ಣ ಮಹೊತ್ಸವ: ಸನ್ಮಾನ
0
ಜನವರಿ 01, 2023
Tags