ತಿರುವನಂತಪುರಂ : ಗುಜರಾತ್ ಗಲಭೆ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿ ಬಿಜೆಪಿ ನಡೆಸಿದ ಮೆರವಣಿಗೆ ಮೇಲೆ ಜಲಫಿರಂಗಿ ಪ್ರಯೋಗಿಸಲಾಗಿದೆ.
ಪೂಜಾಪುರದಲ್ಲಿ ಪೆÇಲೀಸ್ ಕಾವಲಿನಲ್ಲಿ ಡಿವೈಎಫ್ ಐ ನೇತೃತ್ವದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.
ಕೇಂದ್ರ ಸರ್ಕಾರದ ವಿರುದ್ಧ ಸಿಪಿಎಂನ ರಾಜಕೀಯ ಸಮಾಲೋಚನಾ ಸಭೆಯ ನೆಪದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ ನಡೆಸಿತು. ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಪೋಲೀಸರು ಬಿಜೆಪಿ ಕಾರ್ಯಕರ್ತರಿಗೆ ತಿಳಿಸಿದ್ದಾರೆ. ಆದರೆ ಸಿಪಿಎಂ ಸಭೆಯ ನಂತರ ಸಾಕ್ಷ್ಯಚಿತ್ರ ಪ್ರದರ್ಶನ ಪ್ರಾರಂಭವಾಯಿತು. ಇದರೊಂದಿಗೆ ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಬಿಜೆಪಿ ಕಾರ್ಯಕರ್ತರ ಮೆರವಣಿಗೆಯನ್ನು ಪೆÇಲೀಸರು ಬ್ಯಾರಿಕೇಡ್ ಹಾಕಿ ತಡೆದರು.
ಕಾರ್ಯಕರ್ತರು ಬ್ಯಾರಿಕೇಡ್ ದಾಟಲು ಯತ್ನಿಸಿದಾಗ ಪೆÇಲೀಸರು ಜಲಫಿರಂಗಿ ಪ್ರಯೋಗಿಸಿದರು. ಮಹಿಳಾ ಮೋರ್ಚಾ ನೇಮಂ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಶ್ರೀಲತಾ ಸುರೇಶ್ ಗಾಯಗೊಂಡಿದ್ದಾರೆ. ಆಂಬ್ಯುಲೆನ್ಸ್ ಇಲ್ಲದ ಕಾರಣ ನೆಲದ ಮೇಲೆ ಮಲಗಿದ್ದ ಶ್ರೀಲತಾ ಸುರೇಶ್ ಅವರನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕರೆದೊಯ್ಯಲು ಪೆÇಲೀಸರು ನಿರಾಕರಿಸಿದರು. ಇದನ್ನು ಪ್ರಶ್ನಿಸಿದ ಕಾರ್ಯಕರ್ತರ ಮೇಲೆ ಮತ್ತೆ ಜಲಫಿರಂಗಿ ಹಾರಿಸಲಾಯಿತು.
ಕಾರ್ಯಕರ್ತರು ಬ್ಯಾರಿಕೇಡ್ ತಳ್ಳಲು ಯತ್ನಿಸಿದಾಗ ಆಂಬುಲೆನ್ಸ್ ತಂದು ಶ್ರೀಲತಾ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಸುಮಾರು ಒಂದು ಗಂಟೆ ಕಾಲ ಪೆÇಲೀಸರು ಹಾಗೂ ಕಾರ್ಯಕರ್ತರ ನಡುವೆ ವಾಗ್ವಾದ ಮತ್ತು ಜಲಫಿರಂಗಿಗಳನ್ನು ಪ್ರಯೋಗಿಸಲಾಯಿತು. ಈ ವೇಳೆ ಭಾರೀ ಪೆÇಲೀಸ್ ಕಾವಲಿನಲ್ಲಿ ಪೂಜಾಪುರದಿಂದ ಮುದವನಕ್ಕೆ ಹೋಗುವ ಜಂಕ್ಷನ್ ಬಳಿ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯುತ್ತಿತ್ತು.
ಡಿ.ವೈ.ಎಫ್.ಐ.ಯಿಂದ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ: ಪ್ರತಿಭಟಿಸಿ ಬಿಜೆಪಿ ಮೆರವಣಿಗೆ; ಕಾರ್ಯಕರ್ತರ ಮೇಲೆ ಜಲಫಿರಂಗಿ ಪ್ರಯೋಗ
0
ಜನವರಿ 25, 2023
Tags