ಕಣ್ಣೂರು: ಗುರುವಾರ ಕಣ್ಣೂರಿನ ಮನೆಯೊಂದರೊಳಗೆ ಬಾಂಬ್ ಸ್ಪೋಟ್ ಸಭವಿಸಿದ್ದು, ಅದೇ ಸ್ಥಳದಲ್ಲಿ ಮತ್ತಷ್ಟು ಬಾಂಬ್‍ಗಳು ಸ್ಫೋಟಗೊಂಡಿರುವ ಸಾಧ್ಯತೆ ಇದೆ ಎಂದು ಪೆÇಲೀಸರು ತಿಳಿಸಿದ್ದಾರೆ.ಸ್ಫೋಟದಲ್ಲಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಣ್ಣೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಾಡಮ್ಮಾಳ್ ಹೌಸ್ ನಲ್ಲಿ ವಾಸವಿದ್ದ ಯುವಕ ಮನೆಯಲ್ಲಿ ಸ್ಫೋಟದಲ್ಲಿ ಗಾಯಗೊಂಡಿದ್ದಾನೆ. ಗಾಯಗೊಂಡ ಜಿತ್ ಎಂಬವರನ್ನು ಮೊದಲು ತಲಶ್ಶೇರಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗಾಯದ ಸ್ಥಿತಿ ಗಂಭೀರವಾಗಿದ್ದರಿಂದ ಅಲ್ಲಿಂದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ.
ಅಲ್ಲಿ ಒಂದಕ್ಕಿಂತ ಹೆಚ್ಚು ಬಾಂಬ್ ಇರುವ ಸಾಧ್ಯತೆಗಳಿದ್ದು, ಶೀಘ್ರವೇ ಸ್ಪಷ್ಟನೆ ಸಿಗಲಿದೆ ಎಂದು ಕಣ್ಣೂರು ಪೆÇಲೀಸ್ ಆಯುಕ್ತ ಅಜಿತ್ ಕುಮಾರ್ ತಿಳಿಸಿದ್ದಾರೆ.ಸ್ಫೋಟದ ಕುರಿತು ಪೆÇಲೀಸರು ತನಿಖೆ ನಡೆಸುತ್ತಿದ್ದಾರೆ. ಇದು ಸ್ಟೀಲ್ ಬಾಂಬ್ ಎಂದು ತೀರ್ಮಾನಿಸಲಾಗಿದೆ
ಮೊನ್ನೆ ಮಧ್ಯಾಹ್ನ ಲೋಟಸ್ ಥಿಯೇಟರ್ ಬಳಿಯ ಎಂಇಎಸ್ ಶಾಲೆ ಬಳಿಯ ನಾಡಮ್ಮಾಳ್ ಕಾಲೋನಿಯ ಮನೆಯೊಂದರಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಗುರುವಾರ ಮಧ್ಯಾಹ್ನ 2.30ರ ಸುಮಾರಿಗೆ ಈ ಘಟನೆ ನಡೆದಿದೆ. ಭಾರಿ ಸದ್ದು ಕೇಳಿ ಧಾವಿಸಿದ ಹಮಾಲರು ಹಾಗೂ ಸ್ಥಳೀಯರು ಆತನನ್ನು ಕೂಡಲೇ ಜನರಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಫೆÇೀರೆನ್ಸಿಕ್ ವಿಭಾಗ ಮತ್ತು ಕಣ್ಣೂರಿನಿಂದ ಬಂದ ಶ್ವಾನ ದಳವೂ ಮನೆಗೆ ತಪಾಸಣೆ ನಡೆಸಿತು. ಸ್ಫೋಟದಲ್ಲಿ ಒಂದಕ್ಕಿಂತ ಹೆಚ್ಚು ಬಾಂಬ್ ಸ್ಫೋಟಗೊಂಡಿದೆಯೇ ಎಂಬುದನ್ನು ಪರಿಶೀಲಿಸಲಾಗುವುದು ಎಂದು ಕೆ. ಅಜಿತ್ ಕುಮಾರ್ ಹೇಳಿದರು.
ಕಣ್ಣೂರಿನಲ್ಲಿ ಮನೆಯೊಳಗೆ ಬಾಂಬ್ ಸ್ಫೋಟ; ಸ್ಥಳದಲ್ಲಿ ಇನ್ನಷ್ಟು ಬಾಂಬ್‍ಗಳು ಇರುವ ಸಾಧ್ಯತೆ: ಪೋಲೀಸರ ಎಚ್ಚರಿಕೆ
0
ಜನವರಿ 13, 2023
Tags